Top Newsಕ್ರೈಂ ಸ್ಟೋರಿರಾಜಕೀಯಸುದ್ದಿ

ಪ್ರಧಾನಿಯವರ ಪ್ರಧಾನಿ ಕಾರ್ಯದರ್ಶಿಯ ಮಗಳು, ಅಳಿಯನೆಂದು ವಂಚನೆ- ಓಡಿಶಾ ದಂಪತಿ ಅರೆಸ್ಟ್

ಭುವನೇಶ್ವರ: ಪಿಎಂ ಪ್ರಧಾನ ಕಾರ್ಯದರ್ಶಿಯ ಮಗಳು ಹಾಗೂ ಅಳಿಯನ ಸೋಗಿನಲ್ಲಿ ಜನರನ್ನು ವಂಚಿಸುತ್ತಿದ್ದ ಆರೋಪದ ಮೇಲೆ ಓಡಿಶಾ ದಂಪತಿಯನ್ನು ಬಂಧಿಸಲಾಗಿದೆ.

ಆರೋಪಿಗಳನ್ನು ಕಂಧಮಾಲ್ ಜಿಲ್ಲೆಯ ನಿವಾಸಿ ಪತ್ನಿ ಹನ್ಸಿತಾ ಅಭಿಲಿಪ್ಸಾ (38) ಹಾಗೂ ಪತಿ ಅನಿಲ್ ಕುಮಾರ್ ಮೊಹಂತಿ ಎಂದು ಗುರುತಿಸಲಾಗಿದೆ.

ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 329(3), 319(2),318(4) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಂದು ಭುವನೇಶ್ವರದ ವಲಯ 6ರ ಹೆಚ್ಚುವರಿ ಡಿಸಿಪಿ ಸ್ವರಾಜ್ ದೇಬ್ತಾ ತಿಳಿಸಿದ್ದಾರೆ.

ಆರೋಪಿಗಳು ತಮ್ಮ ಮನೆಯಲ್ಲಿ ಗಣ್ಯರ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಮನೆಯ ಗೋಡೆಗಳಲ್ಲಿ ಅಳವಡಿಸಿಕೊಂಡಿದ್ದರು ಎನ್ನಲಾಗಿದೆ. ಅವುಗಳು ನಕಲಿ ಎನ್ನಲಾಗಿದ್ದು, ಪೊಲೀಸರು ಫೋಟೋಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಹನ್ಸಿತಾ ಮತ್ತು ಮೊಹಂತಿ ದಂಪತಿ ಐರಾಮಿ ಕಟ್ಟಡದಲ್ಲಿ ವಾಸವಿದ್ದರು. ಗಣ್ಯ ವ್ಯಕ್ತಿಗಳ ಜೊತೆಗಿರುವ ನಕಲಿ ಛಾಯಾಚಿತ್ರಗಳನ್ನು ಮುದ್ರಿಸಿ ಭುವನೇಶ್ವರದ ಶ್ರೀಮಂತ ಉದ್ಯಮಿಗಳು, ಬಿಲ್ಡರ್ಗಳು, ಗಣಿಗಾರಿಕೆ ನಿರ್ವಾಹಕರು ಮತ್ತು ಇತರ ಪ್ರಭಾವಿ ವ್ಯಕ್ತಿಗಳನ್ನು ವಂಚಿಸುತ್ತಿದ್ದರು. ಸರಕಾರದ ಟೆಂಡರ್ ಪಾಸ್ ಮಾಡಲು ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ಗಣಿ ಮಾಲೀಕರೊಬ್ಬರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೆತ್ತಕೊಂಡ ವೇಳೆ ದಂಪತಿಗಳ ನಕಲಿ ಮುಖ ಬಯಲಾಗಿದೆ.

Comments (0)

Your email address will not be published. Required fields are marked *

Back to top button