ಮೈಸೂರು: ಪವರ್ ಶೇರಿಂಗ್ ಪ್ರಸ್ತಾಪಗಳು ಕಾಂಗ್ರೆಸ್ನಲ್ಲಿ ಕೋಲಾಹಲ ಸೃಷ್ಟಿಸಿವೆ.. ಕಾಂಗ್ರೆಸ್ ಪಕ್ಷದ ಒಳಗೊಳಗೆ ಭಾರೀ ಲೆಕ್ಕಾಚಾರಗಳು ನಡೀತಿದೆ ಎಂಬು ಸುದ್ದಿ ಹರಿದಾಡುತ್ತಿದ್ದು, ಇದೀಗ ಅಹಿಂದ ಸಂಘಟನೆಗಳು ಹೊಸ ಪತ್ರ ಚಳುವಳಿ ಶುರು ಮಾಡಿದೆ..
ಸಿದ್ದರಾಮಯ್ಯ ಅವರನ್ನೇ 5 ವರ್ಷವೂ ಸಿಎಂ ಎಂದು ಘೋಷಣೆ ಮಾಡಿ, ಮೈಸೂರಿನ ಅಹಿಂದ ಸಂಘಟನೆಗಳು ಪತ್ರ ಚಳುವಳಿ ಶುರು ಮಾಡಿದೆ. ರಾಹುಲ್ ಗಾಂಧಿಗೆ ಪತ್ರ ಬರೆಯಲಿರುವ ಅಹಿಂದ ಸಂಘಟನೆಗಳು ಪತ್ರ ಚಳುವಳಿ ಶುರು ಮಾಡಿದೆ.
ರಾಜ್ಯದಲ್ಲಿ ಮೂಡಿರುವ ಮುಂದಿನ ಮುಖ್ಯಮಂತ್ರಿ ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಅಹಿಂದ ಸಂಘಟನೆಗಳು ಆಗ್ರಹಿಸಿದೆ. ಸಿದ್ದರಾಮಯ್ಯ ಅವರನ್ನೇ 5 ವರ್ಷವೂ ಸಿಎಂ ಎಂದು ರಾಹುಲ್ ಗಾಂಧಿಯವರೇ ಘೋಷಣೆ ಮಾಡ್ಬೇಕು ಎಂದು ಪತ್ರ ಚಳುವಳಿ ಮೂಲಕ ಮನವಿ ಮಾಡಿದ್ದಾರೆ.


