*ಬೆಳೆವ ಸಿರಿ ಮೊಳಕೆಯಲ್ಲಿ ಎಂಬಂತೆ ಎಳವೆಯಲ್ಲಿ ಹೊಸ ದಾಖಲೆ ಸೃಷ್ಟಿಸಿ ಕರ್ನಾಟಕಕ್ಕೆ ಕೀರ್ತಿ ತಂದ ವಿಶೇಷ ದಾಖಲೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
*ಬೆಂಗಳೂರು ತಾವರೆಕೆರೆ ಪುಟ್ಟಯ್ಯನ ಪಾಳ್ಯ ನಿವಾಸಗಳಾದ ಗಿರೀಶ್ ಪಿ. ಎಚ್. ಮತ್ತು ಮಂಜುಶ್ರೀ ದಂಪತಿಗಳ ಮುದ್ದು ಮಗಳಾದ ಪುನರ್ವಿಕ ಜೈ ಪಿಜಿ ಅವರು ನೋಬಲ್ ವರ್ಡ್ ರೇಕಾರ್ಡ್ ನ ದಾಖಲೆ ಮುರಿದಿದ್ದಾರೆ , ನೋಬಲ್ ವರ್ಡ್ ರೆಕಾರ್ಡ್ ನಲ್ಲಿ ಆಂಧ್ರದ ಕೈವಲ್ಯ ಸೇರಿ ಇನ್ನು ಇಬ್ಬರು ಮಕ್ಕಳು 120 ಫ್ಲ್ಯಾಶ್ ಕಾರ್ಡ್ ಗುರುತಿಸುವ ದಾಖಲೆ ಮಾಡಿದ್ದರು. ಈಗ ಕರ್ನಾಟಕದ ಹೆಮ್ಮೆಯ ಕಂದ ಪುನರ್ವಿಕ ದಾಖಲೆ ಬ್ರೇಕ್ ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಪ್ರಪಂಚದಲ್ಲೇ ಅತಿ ವೇಗವಾಗಿ ಕನ್ನಡ ಮತ್ತು ಇಂಗ್ಲೀಷ್ 2 ಭಾಷೆಯಲ್ಲೂ ಅರ್ಥ ಮಾಡಿಕೊಂಡು ವಿಭಿನ್ನವಾದ ಕಾರ್ಡ್ ಗಳನ್ನು ಗುರುತಿಸುವ ಈ ಸಾಧನೆ ನಿಜಕ್ಕೂ ನಮ್ಮ ರಾಜ್ಯದ ಪಾಲಿಗೆ ಹೆಮ್ಮೆ ತಂದ ವಿಚಾರವಾಗಿದೆ.
ಮಗು ಹುಟ್ಟಿದ್ದ ಒಂದು ತಿಂಗಳಿಗೆ ಆಟವಾಡಲೆಂದು ಬ್ಲ್ಯಾಕ್ ಆ್ಯಂಡ್ ವೈಟ್ ಕಾರ್ಡ್ ಗುರುತಿಸಲು ತಿಳಿಸಿಕೊಡಲಾಗಿದೆ. ಅದನ್ನು ಶ್ರದ್ಧೆಯಿಂದ ಕೇಳಿ ಯಾವುದು ಸರಿಯಾದ ಕಾರ್ಡ್ ಎಂದು ಕಣ್ಣಲ್ಲೆ ಗುರುತಿಸಿ ಸೂಚಿಸುತ್ತಿತ್ತು. ಹಾಗಾಗಿ ಇದನ್ನೆ ಮುಂದು ವರಿಸಿ ಬೇರೆ ಬೇರೆ ಕಾರ್ಡ್ ಬಗ್ಗೆ ತಿಳಿಸಿಕೊಡಲಾಗಿದ್ದು ಎರಡು ವರೆ ತಿಂಗಳ ಬಳಿಕ ಕೈಗಳಿಂದ ಫ್ಲ್ತಾಶ ಕಾರ್ಡ್ ನಿಖರವಾಗಿ ಗುರುತಿಸುತ್ತಿದ್ದಾರೆ.
ಮಗುವಿನ ತಂದೆ ತಾಯಿ ಸಾಮಾಜಿಕ ಜಾಲತಾಣದಲ್ಲಿ ನೋಬಲ್ ವರ್ಡ್ ರೆಕಾರ್ಡ್ ಬಗ್ಗೆ ತಿಳಿದುಕೊಂಡಿದ್ದಾರೆ. ಬಳಿಕ ಅವರನ್ನು ಕಾಂಟೆಕ್ಟ್ ಮಾಡಿದಾಗ ಕೆಲವು ವಿಚಾರ ಲೈವ್ ರೆಕಾರ್ಡ್ ಅಗತ್ಯ ಎಂಬುದು ಸೂಚಿಸಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಸಂಬಂಧ ಪಟ್ಟ ವೀಡಿಯೋ ದಾಖಲೆ ಸಹ ಕಳುಹಿಸಲಾಗಿದೆ. ಈಗ ನೋಬಲ್ ವರ್ಡ್ ರೆಕಾರ್ಡ್ ನಲ್ಲಿ ವಿಶ್ವಕ್ಕೆ ಕರ್ನಾಟಕದಿಂದ ಈ ಹೊಸ ಸಾಧನೆ ದಾಖಲಾಗಿದೆ. ಈ ಎಳವೆಯಲ್ಲಿಯೇ ಸಾಧನೆ ಮಾಡಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆಯ ಸಂಗತಿ ಎನ್ನುವುದು ಪೋಷಕರ ಅಭಿವ್ಯಕ್ತಿಯಾಗಿದೆ. ಸದ್ಯ ಈ ಪುಟ್ಟ ಕುವರಿಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಪ್ರಶಂಸೆ ದೊರೆಯುತ್ತಿದ್ದು ಈ ಸಾಧನೆ ಇನ್ನಷ್ಟು ಉತ್ತುಂಗದ ಶಿಖರ ತಲುಪಲಿ ಎಂಬುದೇ ನಮ್ಮ ಹಾರೈಕೆ.