ಸದಾ ಒಂದಲ್ಲದೊಂದು ವಿವಾದ ಹುಟ್ಟಿ ಹಾಕುತ್ತಿದ್ದ ಸ್ವಾಮೀಜಿ ಸಡನ್ ಆಗಿ ಡೆತ್ ಆಗಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ..ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿ ಸಾವಿನ ಸುದ್ದಿ ಈಗ ಭಾರೀ ಸಂಚಲನ ಮೂಡಿಸಿದೆ.. ಹಲವಾರು ವಿವಾದಗಳಲ್ಲಿ ಸಿಲುಕಿ ದೇಶ ಬಿಟ್ಟು ಪಲಾಯನ ಮಾಡಿದ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಸಾವಿನ ಸುದ್ದಿ ಕೇಳಿ ಬರುತ್ತಿದೆ. ನಿತ್ಯಾನಂದ ಸ್ವಾಮಿ ಮೃತಪಟ್ಟಿದ್ದಾರೆ ಎಂದು ಆತನ ಸೋದರಳಿಯ ಮಾಹಿತಿ ನೀಡಿದ್ದಾನೆ ಎಂದು ವರದಿಯಾಗಿವೆ.ಈ ಕುರಿತ ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ..ಅತ್ಯಾಚಾರ ಆರೋಪ ಹಾಗೂ ಹಲವಾರು ವಿವಾದಗಳಲ್ಲಿ ಸಿಲುಕಿ ದೇಶ ಬಿಟ್ಟು ಪಲಾಯನ ಮಾಡಿ ಕೈಲಾಸ ಎಂಬ ದೇಶವನ್ನು ನಿರ್ಮಾಣ ಮಾಡಿ ಅಲ್ಲಿ ತನ್ನ ಶಿಷ್ಯರೊಂದಿಗೆ ವಾಸವಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮಿಯ ಬಗ್ಗೆ ನಮಗೆಲ್ಲರಿಗೂ ಗೊತ್ತೇಯಿದೆ ಅಲ್ವಾ. ಇದೀಗ ಈ ವಿವಾದಿತ ಸ್ವಾಮಿ ಮೃತಪಟ್ಟಿದ್ದಾನೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ನಿತ್ಯಾನಂದ ಎರಡು ದಿನಗಳ ಹಿಂದೆ ನಿಧನರಾದರು ಎಂಬ ಸುದ್ದಿಯನ್ನು ಆತನ ಸೋದರಳಿಯ ಸುಂದರೇಶ್ವರನ್ ಹೇಳಿಕೊಂಡಿದ್ದು, ಈ ಸುದ್ದಿ ಈಗ ವೈರಲ್ ಆಗುತ್ತಿದೆ. ಈ ಸಾವಿನ ಸುದ್ದಿಯ ಬಗ್ಗೆ ಇನ್ನೂ ಸ್ಪಷ್ಟತೆ ಲಭ್ಯವಾಗದ ಕಾರಣ ಜನ ಇದೆಲ್ಲಾ ಏಪ್ರಿಲ್ ಫೂಲ್ ದಿನದ ಸಲುವಾಗಿ ಮಾಡಿದ ಪ್ರಚಾರದ ಗಿಮಿಕ್ ಎಂದು ಮಾತನಾಡಿಕೊಳ್ಳುತ್ತಿದ್ದಾರೆ…


