ರಾಜ್ಯ

Newdelhi |ಸುಪ್ರೀಂ ಕೋರ್ಟ್​ನಲ್ಲಿ ಸದ್ದು ಮಾಡುತ್ತಿದೆ ಐಎಎಸ್ ಹಾಗೂ ಐಪಿಎಸ್​ ಅಧಿಕಾರಿಗಳ ಜಡೆ ಜಗಳ

ಹೊಸದಿಲ್ಲಿ : ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಡಿಲೀಟ್​ ಮಾಡುವಂತೆ ಐಪಿಎಸ್​ ಅಧಿಕಾರಿ ಡಿ.ರೂಪಾ ಅವರಿಗೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ.

ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಆಕ್ಷೇಪಾರ್ಹ ಪೋಸ್ಟ್​ಗಳನ್ನು ಪ್ರಕಟಿಸಿದ್ದ ಐಪಿಎಸ್​ ಅಧಿಕಾರಿ ಡಿ ರೂಪಾ ವಿರುದ್ಧ ಐಎಎಸ್​ ಅಧಿಕಾರಿ ರೋಹಿಣಿ ಸಿಂದೂರಿ ಅವರು ಕ್ರಿಮಿನಲ್​ ಮಾನನಷ್ಟ ಮೊಕದ್ದಮೆಯನ್ನು ರದ್ದುಪಡಿಸಬೇಕೆಂದು ಕೋರಿ ಡಿ ರೂಪಾ ಅವರು ಕೋರ್ಟ್​ ಮೆಟ್ಟಲೇರಿದ್ದರು. ಈ ಪ್ರಕರಣದ ವಿಚಾರಣೆ ವೇಳೆ ತಮ್ಮ ವಾದ ಮಂಡಿಸಿದ ಡಿ. ರೂಪಾ ಪರ ವಕೀಲರು, ಪುರುಷ ಅಧಿಕಾರಿಗಳಿಗೆ ರೋಹಿಣಿ ಸಿಂಧೂರಿ ಅವರು ತಮ್ಮ ಫೋಟೋಗಳನ್ನು ಕಳಿಸುತ್ತಾರೆ ಎಂದು ಆರೋಪಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್, ಈ ರೀತಿಯ ವಾದಗಳನ್ನು ಆಲಿಸಿ ನಾವು ನಿಮ್ಮ ಅರ್ಜಿಯನ್ನು ಪರಿಗಣಿಸುತ್ತೇವೆ ಎಂದು ಭಾವಿಸಬೇಡಿ ಎಂದು ಹೇಳಿತು.

ಹೀಗಾಗಿ ಅಂತಿಮವಾಗಿ ತನ್ನ ತೀರ್ಮಾನ ಪ್ರಕಟಿಸಿದ ಸರ್ವೋಚ್ಛ ನ್ಯಾಯಾಲಯ, ನಾಳೆಯ ಒಳಗಾಗಿ ರೋಹಿಣಿ ಸಿಂಧೂರಿ ವಿರುದ್ಧದ ಆಕ್ಷೇಪಾರ್ಹ ಪೋಸ್ಟ್‌ ಡಿಲೀಟ್ ಮಾಡಿ, ಇಲ್ಲವಾದ್ರೆ ಪೋಸ್ಟ್‌ ಹಿಂಪಡೆಯಲಾಗಿದೆ ಎಂದು ಸಂದೇಶ ಪ್ರಕಟಿಸಿ ಎಂದು ಡಿ. ರೂಪಾ ಅವರಿಗೆ ಹೇಳಿತು.

Comments (0)

Your email address will not be published. Required fields are marked *

Back to top button