ಬೆಂಗಳೂರು : ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ನಡೆಸಿದ ಬಳಿಕ ಹೊಷ ವರ್ಷಾಚರಣೆ ಬಗ್ಗೆ ರೂಪುರೇಷೆ ಸಿದ್ಧ, ಕೇರಳದಲ್ಲಿ ಕೊರೊನಾ ಸೋಂಕು ವಕ್ಕರಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಹೊಸ ವರ್ಷಾಚರಣೆಗೆ ತೊಡಕಾಗುವ ಸಾಧ್ಯತೆಯಿದೆ. ಮುಖ್ಯವಾಗಿ ಎಂ.ಜಿ.ರೋಡ್ ಹಾಗೂ ಬಿಗ್ರೇಡ್ ರಸ್ತೆಯಲ್ಲಿ ಹೊಸ ವರ್ಷ ಆಚರಣೆಗೆ ಕಡಿವಾಣ ಬೀಳುವ ಆತಂಕ ಎದುರಾಗಿದೆ.


ಕೇರಳದಲ್ಲಿ ಕೊರೊನಾ ಸಾಂಕ್ರಾಮಿಕ ಕಾಣಿಸಿಕೊಂಡು ನಾಲ್ವರು ಮೃತಪಟ್ಟಿರುವುದು ದೃಢವಾಗಿದೆ. ಇದರ ಬೆನ್ನಲೇ ರಾಜ್ಯ ಸರ್ಕಾರ ತಜ್ಞರೊಂದಿಗೆ ಸಭೆ ನಡೆಸಿ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ ಎಂದು ಆದೇಶ ಹೊರಡಿಸಿತ್ತು. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕು ವ್ಯಾಪಿಸಿದಂತೆ ಮುಂಜಾಗ್ರತವಾಗಿ ಕ್ರಮ ಕೈಗೊಳ್ಳಬೇಕಿದೆ.‌ ಹೀಗಾಗಿ ಎಂ.ಜಿ.ರೋಡ್ ಹಾಗೂ ಬಿಗ್ರೇಡ್ ರೋಡ್ ನಲ್ಲಿ ಎಂದಿನಂತೆ ಹೊಸ ವರ್ಷಾಚರಣೆ ಅವಕಾಶ ನೀಡುವ ಬಗ್ಗೆ ನಗರ ಪೊಲೀಸರಲ್ಲಿ ಗೊಂದಲ ಮೂಡಿದೆ. ಆರೋಗ್ಯ ಇಲಾಖೆ, ಬಿಬಿಎಂಪಿ ಜೊತೆ ಸಭೆ ನಡೆಸಿದ ಬಳಿಕ ಹೊಸ ವರ್ಷಾಚರಣೆಯ ಪರಿಷ್ಕೃತ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ಆಯುಕ್ತರು ನ್ಯೂ ಇಯರ್ ಗೆ ಸಂಬಂಧಿಸಿದಂತೆ ಸಭೆಗಳನ್ನ ನಡೆಸಲಾಗುತ್ತಿದೆ. ಆಚರಣೆ ನಡೆಸುವ ಯಾರಿಗೂ ಕೂಡ ಅಡಚಣೆ ಆಗದ ರೀತಿ ನೋಡಿಕೊಳ್ಳಲಾಗುತ್ತದೆ. ಕಳೆದ ಬಾರಿ‌ ಹೇಗೆ ನಡೆಸಲಾಗಿತ್ತೋ ಈ ಬಾರಿಯೂ ಅದೇ ರೀತಿ ಇರಲಿದೆ.. ಎಂ.ಜಿ. ರೋಡ್ ನಲ್ಲಿ‌ ಮಧ್ಯರಾತ್ರಿ ಅನುಮತಿ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ. ಕೋವಿಡ್ ಹೊಸ ಅಲೆಯ ಬಗ್ಗೆಯೂ ಅಧಿಕಾರಿಗಳ ಜೊತೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

By admin

Leave a Reply

Your email address will not be published. Required fields are marked *

Verified by MonsterInsights