ಬೆಂಗಳೂರು, ಡಿ.31: ಹೊಸ ವರ್ಷಾಚರಣೆ ಸಿಲಿಕಾನ್ ಸಿಟಿ ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ. ಅದರ ನಡುವೆ ಮೆಟ್ರೋ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರವೂ ಮಧ್ಯ ರಾತ್ರಿವರೆಗೂ ಇರಲಿದೆ. ಹೊಸ ವರ್ಷಾಚರಣೆ ಹಿನ್ನಲೆ ಸಾರಿಗೆ ಇಲಾಖೆಯು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ಹೊಸ ವರ್ಷದ ಪ್ರಯುಕ್ತ ಡಿಜೆ ಪಾರ್ಟಿ ಸೇರಿದಂತೆ ನಗರದ ಹಲವೆಡೆ ಕಾರ್ಯಕ್ರಮಗಳು ಇರಲಿದೆ. ಇನ್ನು ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೋಲಿಸರು ನಗರದಾದ್ಯಂತ ಸರ್ಪಗಾವಲು ಹಾಕಿದ್ದಾರೆ.

ಅದರ ನಡುವೆ ನಗರದಲ್ಲಿ ಅದ್ದೂರಿ ಸಂಭ್ರಮ ಇರುವುದರಿಂದ ತಡರಾತ್ರಿ 12 ಗಂಟೆವರೆಗೂ ‘ನಮ್ಮ ಮೆಟ್ರೋ’ ಅದರ ಜೊತೆಯಲ್ಲಿ BMTC ಬಸ್ಸು ವ್ಯವಸ್ಥೆಗಳು ಲಭ್ಯವಿರಲಿದೆ. ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಗೆ ಹೊಸ ವರ್ಷಾಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.
ಹೀಗಾಗಿ ಆ ಮಾರ್ಗದಲ್ಲಿ ಹೆಚ್ಚುವರಿ ಬಸ್ಗಳನ್ನು ನಿಯೋಜಿಸಲಾಗಿದೆ. ತಡರಾತ್ರಿ ವೇಳೆ ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಿಂದ ಸರ್ಜಾಪುರ, ಬನ್ನೇರುಘಟ್ಟ, ಕೆಂಗೇರಿ, ನೆಲಮಂಗಲ, ಕಾಡುಗೋಡಿ, ಎಲೆಕ್ಟ್ರಾನಿಕ್ ಸಿಟಿ, ಗೊರಗುಂಟೆ ಪಾಳ್ಯ ಸೇರಿದಂತೆ ಹಲವು ಏರಿಯಾಗಳಿಗೆ ಬಿಎಂಟಿಸಿ ಬಸ್ ವ್ಯವಸ್ಥೆ ಇರಲಿದೆ.