ಬೆಂಗಳೂರು: ಡಾಲಿ ನಟನೆಯ ಸಿದ್ಧವಿರುವ ‘ಕೋಟಿ’ ಸಿನಿಮಾ ಈಗಾಗಲೇ ಟ್ರೈಲರ್ ಮತ್ತು ಹಾಡುಗಳಿಂದ ಸದ್ದು ಮಾಡುತ್ತಿದೆ. ಡಾಲಿ ಧನಂಜಯ್ ‘ಕೋಟಿ’ ಎಂಬ ಒಬ್ಬ ಸಾಮಾನ್ಯ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕೋಟಿಗೆ ಯಾರಿಗೂ ಮೋಸ ಮಾಡದೆ, ನೋವು ನೀಡದೆ ಒಂದು ಕೋಟಿ ರೂಪಾಯಿ ದುಡಿದು ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವ ಬಯಕೆ.
‘ಕೋಟಿ’ ಚಿತ್ರದ ಇನ್ನೊಂದು ವಿಶೇಷತೆ ಇಬ್ಬರು ಹೊಸ ಪ್ರತಿಭೆಗಳು. ‘ಕೋಟಿ’ಯಲ್ಲಿ ಧನಂಜಯ್‌ಗೆ ತಾಯಿಯಾಗಿ ತಾರಾ ಅಭಿನಯಿಸಿದ್ದರೆ, ತಮ್ಮ – ತಂಗಿಯಾಗಿ ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್ ಅಭಿನಯಿಸಿದ್ದಾರೆ. ಇತ್ತಿಚೆಗೆ ನಡೆದ ಚಿತ್ರದ ಟ್ರೈಲರ್ ರಿಲೀಸ್ ಸಮಾರಂಭದಲ್ಲಿ ಡಾಲಿ ಧನಂಜಯ್ ಮತ್ತು ತಾರಾ ಅವರು ಈ ಹೊಸ ಪ್ರತಿಭೆಗಳ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉದಯೋನ್ಮುಖ ನಟ ‘ಪೃಥ್ವಿ ಶಾಮನೂರು’ ಈಗಾಗಲೇ ಹರಿಪ್ರಸಾದ್ ಜಯಣ್ಣ ನಿರ್ದೇಶನದ ‘ಪದವಿ ಪೂರ್ವ’ದ ಮುಖಾಂತರ ತಮ್ಮ ಸಿನಿಮಾ ಪಯಣವನ್ನು ಆರಂಭಿಸಿದ್ದಾರೆ. ಕೋಟಿ ಸಿನಿಮಾದಲ್ಲಿ ಇವರ ಪಾತ್ರ ನಚ್ಚಿ, ಕೋಟಿಯ ಪ್ರೀತಿಯ ತಮ್ಮ. ಯಾರಿಗೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಇವನು ಅಕ್ಕ ಅಣ್ಣಂದಿರ ಕಾಡಿಸುತ್ತ ನಗಿಸುತ್ತ ಮನೆಗೊಂದು ಕಳೆ ತರುವ ತುಂಟ. ಹಾಗೆಯೆ ಕೋಟಿಯ ತಂಗಿ ‘ಮಹತಿ’ಯ ಪಾತ್ರದಲ್ಲಿ ರಂಗಭೂಮಿ ಹಿನ್ನೆಲೆಯ ತನುಜಾ ವೆಂಕಟೇಶ್ ಕಾಣಿಸಿಕೊಂಡಿದ್ದಾರೆ. ಇವರಿಗೆ ಇದು ಚೊಚ್ಚಲ ಸಿನಿಮಾ.
ಕೋಟಿ ಚಿತ್ರದ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಪೃಥ್ವಿ ಶಾಮನೂರು ನಚ್ಚಿ ಒಂದು ಸಣ್ಣ ಪಾತ್ರವಾದರೂ ತುಂಬಾ ಇಂಪ್ಯಾಕ್ಟ್ ಇರುವ ಪಾತ್ರ. ಇಷ್ಟು ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿ ಇದೆ ಎಂದರು. ಕೋಟಿಯ ತಂಗಿಯ ಪಾತ್ರ ಮಾಡಿರುವ ತನುಜಾ ವೆಂಕಟೇಶ್ ನಾನು ಕೋಟಿಯ ತಂಗಿ ‘ಮಹತಿ’ಯಾಗಿ ಅಭಿನಯಿಸಿದೀನಿ. ಒಂದು ಇಂಪಾರ್ಟೆಂಟ್ ಪಾತ್ರ. ಧನಂಜಯ್ ಅಣ್ಣ, ತಾರಮ್ಮ ಮತ್ತು ಪೃಥ್ವಿ ಅವರ ಜತೆ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಒಂದು ಕುಟುಂಬದ ಜತೆ ಇದ್ದಂತೆ ಅನಿಸಿತು” ಎಂದು ಸಂತಸ ಹಂಚಿಕೊಂಡರು.
ಕೋಟಿ ಚಿತ್ರದ ನಿರ್ದೇಶಕ ಪರಮ್ , ಈಗಾಗಲೇ ಹೀರೋ ಆಗಿ ‘ಪದವಿ ಪೂರ್ವ’ ಚಿತ್ರದಲ್ಲಿ ನಟಿಸಿರುವ ಪೃಥ್ವಿ ಶಾಮನೂರು ‘ನಚ್ಚಿ’ ಪಾತ್ರವನ್ನು ಇಷ್ಟಪಟ್ಟು ಒಪ್ಪಿ ನಟಿಸಿದ್ದಾರೆ. ಅವರ ಅಭಿನಯದ ಎರಡು ದೃಶ್ಯಗಳನಂತೂ ನೀವು ತುಂಬಾ ಇಷ್ಟ ಪಡುತ್ತೀರಿ. ‘ಮಹತಿ’ಯ ಪಾತ್ರ ಮಾಡಿರುವ ತನುಜಾ ಅವರ ಮೊದಲ ಸಿನಿಮಾ ಇದು. ಅವರ ಅಭಿನಯದಲ್ಲಿ ತುಂಬಾ ಲೈಫ್ ಇದೆ. ಪ್ರತಿಭಾವಂತ ನಟಿ ಎಂದರು. ಕೋಟಿ ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ಮತ್ತು ಖಳನಾಯಕನಾಗಿ ರಮೇಶ್ ಇಂದಿರಾ ಇದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com