Tuesday, April 29, 2025
30.4 C
Bengaluru
LIVE
ಮನೆಸುದ್ದಿಮೇ 1ರಿಂದ ATM ಬಳಕೆದಾರರಿಗೆ ಹೊಸ ನಿಯಮ...!

ಮೇ 1ರಿಂದ ATM ಬಳಕೆದಾರರಿಗೆ ಹೊಸ ನಿಯಮ…!

ಎಟಿಎಂ ಬಳಕೆದಾರರಿಗೆ ಶಾಕಿಂಗ್​ ನ್ಯೂಸ್​..ಸಣ್ಣ ಪುಟ್ಟದಕ್ಕೂ ಜನ ಎಟಿಎಂ ಮೊರೆ ಹೋಗ್ತಾರೆ..ಎಟಿಎಂ ನೆಚ್ಚಿಕೊಂಡಿರುವ ಗ್ರಾಹಕರಿಗೆ ಹಣ ಹಿಂಪಡೆಯುವುದು ಮತ್ತಷ್ಟು ದುಬಾರಿ ಆಗಲಿದೆ. ಮೇ ಒಂದರಿಂದ ವಿತ್​ ಡ್ರಾ ಶುಲ್ಕ ಎರಡು ರೂಪಾಯಿ ಹೆಚ್ಚಳವಾಗಲಿದೆ.

ಉಚಿತ ವಹಿವಾಟು ಮಿತಿಮೀರಿದ ನಂತರ ಎಟಿಎಂನಿಂದ ಹಣ ವಿತ್​ ಡ್ರಾ ಮಾಡಲು ಹೋದರೆ ಮೊದಲಿಗಿಂತ 2 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಇಷ್ಟಕ್ಕೆಲ್ಲ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂಟರ್‌ಚೇಂಜ್ ಶುಲ್ಕವನ್ನು ಹೆಚ್ಚಿಸಿರೋದು. ಈ ಮೊದಲು ಪ್ರತಿ ವಹಿವಾಟಿಗೆ 17 ರೂಪಾಯಿ ವಿಧಿಸಬೇಕಾಗಿತ್ತು. ಇನ್ಮುಂದೆ 19 ರೂಪಾಯಿ ಪಾವತಿಸಬೇಕಾಗುತ್ತದೆ.

ATM ಇಂಟರ್‌ಚೇಂಜ್ ಶುಲ್ಕ ಅಂದರೆ ಎಟಿಎಂ ಸೇವೆ ಒದಗಿಸುವುದಕ್ಕಾಗಿ ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್​​ಗೆ ವಿಧಿಸುವ ಶುಲ್ಕವಾಗಿದೆ. ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂ ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿ ಮೀರಿದಾಗ ಹೆಚ್ಚುವರಿಯಾಗಿ 2 ರೂಪಾಯಿ ಪಾವತಿಸಬೇಕಾಗುತ್ತದೆ. ಬ್ಯಾಲೆನ್ಸ್ ಸೇರಿದಂತೆ ವಿಚಾರಣೆಯಂತಹ ಹಣಕಾಸೇತರ ವಹಿವಾಟುಗಳಿಗೆ ನೀವು ಎಟಿಎಂಗೆ ಹೋದರೆ 1 ರೂಪಾಯಿ ಹೆಚ್ಚುವರಿ ಶುಲ್ಕ ವಿಧಿಸಬೇಕಾಗುತ್ತದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments