ಹೊಸ ತೊಡಕು ಹಿನ್ನಲೆ; ಕುರಿ, ಮೇಕೆ ಭಾರಿ ಡಿಮ್ಯಾಂಡ್

ಬೆಂಗಳೂರು: ಮೊನ್ನೆಯಷ್ಟೇ ಹಿಂದೂಗಳೇಲ್ಲರೂ ಅದ್ದೂರಿಯಾಗಿ ಯುಗಾದಿ ಹಬ್ಬವನ್ನು ಆಚರಿಸಿದ್ರು, ನಿನ್ನೆ ರಂಜಾನ್ ಹಬ್ಬವು ಇತ್ತು. ಇನ್ನು ಇವತ್ತು ಹೊಸ ತೊಡಕನ್ನು ಆಚರಿಸಲಾಗುತ್ತಿದೆ. ಆದ್ರಿಂದ ಕುರಿ, ಮೇಕೆಗೆ ಭಾರಿ ಡಿಮ್ಯಾಂಡ್ ಶುರುವಾಗಿದೆ.
ಹೊಸತೊಡಕಿಗಾಗಿ ರಾಜ್ಯದಿಂದ ಮಾತ್ರವಲ್ಲ ಹೊರ ರಾಜ್ಯದಿಂದಲೂ ಕುರಿ ಮೇಕೆಗಳು ಬಂದಿದ್ದು, ಕೆಜಿ ಮಟನ್ ಮಾಂಸಕ್ಕೆ 800 ಇದ್ದದ್ದು, 900 ರವರಗೆ ಆಗಿದೆ.
ಚಿಕನ್, ಮಟನ್ ಖರೀದಿಗೆ ಬೆಳಗ್ಗೆಯೇ ಮಾಂಸದಂಗಡಿಯಲ್ಲಿ ಜನರ ದಂಡು ಇತ್ತು. ಜನರು ಮುಗಿಬಿದ್ದು ಮಾಂಸ ಖರೀದಿಸಿದರು. ಗ್ರಾಮೀಣ ಭಾಗಗಳಲ್ಲಿ ಹಲವು ಕಡೆ ಗುಡ್ಡೆ ಮಾಂಸ ಮಾರಾಟ ಮಾಡಲಾಯಿತು.
ನಿನ್ನೆ ರಂಜನ್ ಹಬ್ಬ ಬೇರೆ. ಹಾಗಾಗಿ ಮಟನ್‌ಗೆ ಭಾರೀ ಬೇಡಿಕೆ ಬಂದಿದ್ದು, ಕುರಿ-ಮೇಕೆಗಳ ಬೆಲೆ ಹೆಚ್ಚಾಗಿದೆ. ಅದರಲ್ಲೂ ನಾಟಿ ಮರಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಇಂದು ಮತ್ತು ನಾಳೆ ಎರಡು ದಿನ ಹೆಚ್ಚಿನ ವ್ಯಾಪಾರ ಕೂಡ ಆಗುವ ನೀರಿಕ್ಷೆ ಇದ್ದು, ಈಗಾಗಲೇ ಮಾಂಸ ವ್ಯಾಪಾರಿಗಳು ಹಬ್ಬಕ್ಕಾಗಿ ಕುರಿ-ಮೇಕೆಗಳನ್ನ ರೈತರಿಂದ ಖರೀದಿಸಿದ್ದಾರೆ. ರೈತರು ಸಹ ಎರಡು ಹಬ್ಬ ಒಟ್ಟಿಗೆ ಬಂದಿರುವುದರಿಂದ ಹೆಚ್ಚಿನ ಲಾಭಕ್ಕೆ ಮರಿಗಳನ್ನ ಮಾರಾಟ ಮಾಡ್ತಿದ್ದಾರೆ.
ಹೊಸತೊಡಕಿಗಾಗಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ದೊಡ್ಡಬಳ್ಳಾಪುರ, ಮಾಗಡಿ, ರಾಮನಗರ, ಗೌರಿಬಿದನೂರು ಸೇರಿದಂತೆ ಇತರೆ ಭಾಗದಿಂದ ಕುರಿ ಮೇಕೆಗಳು ಬೆಂಗಳೂರಿನ ಮಾಂಸದಂಗಡಿಗೆ ಬಂದಿದೆ.




