ಮಾಸ್ಕೋ, ಜುಲೈ 9: ಭಾರತ ಮತ್ತು ರಷ್ಯಾ ನಡುವಿನ ಸ್ನೇಹದಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸ್ನೇಹ ಗಟ್ಟಿಯಾಗುತ್ತಿದೆ. ಪುಟಿನ್ ತಮ್ಮ ನಿವಾಸದ ಅಂಗಳದಲ್ಲಿ ಪುಟ್ಟ ಎಲೆಕ್ಟ್ರಿಕ್ ಗಾಡಿಯಲ್ಲಿ ಮೋದಿಯನ್ನು ಕೂರಿಸಿಕೊಂಡು ಸುತ್ತಾಡಿಸಿದ ಘಟನೆ ನಡೆಯಿತು. ಸ್ವತಃ ಪುಟಿನ್ ಅವರೇ ಗೋಲ್ಫ್ ಕಾರ್ಟ್ ಅನ್ನು ಡ್ರೈವ್ ಮಾಡುತ್ತಿದ್ದರು. ಮೋದಿ ಅವರ ಪಕ್ಕದ ಸೀಟಿನಲ್ಲಿ ಕೂತು ಈ ಶಾರ್ಟ್ ಡ್ರೈವ್ ಅನ್ನು ಆನಂದಿಸುತ್ತಿದ್ದಂತಿತ್ತು.

ಇಂಟರ್​ಪ್ರಿಟರ್ ಬಿಟ್ಟು ಮಾತನಾಡತೊಡಗಿದ ಮೋದಿ-ಪುಟಿನ್

ಪುಟ್ಟದಾದ ಕಾರ್ಟ್ ಎಲೆಕ್ಟ್ರಿಕ್ ಗಾಡಿಯಲ್ಲಿ ವ್ಲಾದಿಮಿರ್ ಪುಟಿನ್ ಮತ್ತು ಮೋದಿ ಅವರಷ್ಟೇ ಅಲ್ಲದೆ ಇಬ್ಬರು ಇಂಟರ್​ಪ್ರಿಟರ್​ಗಳೂ ಇದ್ದರು. ತಮ್ಮ ನಿವಾಸದಲ್ಲಿನ ಉದ್ಯಾನದಾದ್ಯಂತ ಈ ಗಾಡಿ ಓಡಾಡಿತು. ಮೋದಿ ಮತ್ತು ಪುಟಿನ್ ಇಬ್ಬರೂ ಇಂಟರ್​ಪ್ರಿಟರ್​ಗಳ ಸಹಾಯದೊಂದಿಗೆ ಸಂವಾದ ನಡೆಸಿದ್ದು ಕಂಡು ಬಂದಿತು.

ಎಲೆಕ್ಟ್ರಿಕ್ ಗಾಡಿಯಿಂದ ಕೆಳಗಿಳಿದ ಬಳಿಕ ಇಬ್ಬರೂ ಉದ್ಯಾನದಲ್ಲಿ ನಡೆದರು. ಈ ವೇಳೆ ಇಂಟರ್​ಪ್ರಿಟರ್​ಗಳು ಜೊತೆಯಲ್ಲಿ ಇರಲಿಲ್ಲ. ಇಂಟರ್​ಪ್ರಿಟರ್​ಗಳ ಸಹಾಯವಿಲ್ಲದೇ ಇಬ್ಬರೂ ಇಂಗ್ಲೀಷ್ ಭಾಷೆಯಲ್ಲಿ ಮಾತನಾಡುತ್ತಿದ್ದಿರಬಹುದು.

ನರೇಂದ್ರ ಮೋದಿ ಅವರು ಎರಡು ದಿನದ ಭೇಟಿಗಾಗಿ ರಷ್ಯಾಗೆ ಆಗಮಿಸಿದ್ದಾರೆ. ನಿನ್ನೆ (ಜುಲೈ 8) ರಾತ್ರಿ ಮೋದಿ ಅವರಿಗೆ ಪುಟಿನ್ ಔತಣಕೂಟ ಏರ್ಪಡಿಸಿದ್ದರು.

 

By admin

Leave a Reply

Your email address will not be published. Required fields are marked *

Verified by MonsterInsights