ಕರ್ನಾಟಕದ ಹೆಮ್ಮೆಯ ಸಂಸ್ಥೆ ಕೆಎಂಎಫ್ ಎರಡು ಹೊಚ್ಚ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಟ್ಟಿದೆ. ಇಷ್ಟು ದಿನ ರಸ್ತೆ ಬದಿಯಲ್ಲಿ ಮಾರಾಟವಾಗ್ತಿದ್ದ ರಾಗಿ ಅಂಬಲಿಗೆ ಬ್ರಾಂಡ್ ಸ್ವರೂಪ ನೀಡಿದೆ.
200 ಎಂಎಲ್ ಸ್ಯಾಚೆಟ್ನಲ್ಲಿ ನಂದಿನಿ ರಾಗಿ ಅಂಬಲಿಯನ್ನು ಮಾರುಕಟ್ಟೆಗೆ ಬಿಟ್ಟಿದೆ. ಇದು ಥೇಟ್ ಮನೆಯಲ್ಲಿ ಮಾಡಿದ ರಾಗಿ ಅಂಬಲಿಯಂತೆ ಸ್ವಾದಿಷ್ಟ ಟೇಸ್ಟ್ ಒಳಗೊಂಡಿದೆ.
ಸದ್ಯ ಮೈಮುಲ್ ಸಂಸ್ಥೆ ಉತ್ಪಾದನೆ ಮಾಡ್ತಿರುವ ರಾಗಿ ಅಂಬಲಿಯನ್ನು ಮೈಸೂರು ಮಾರ್ಕೆಟ್ನಲ್ಲಿ ಲಭ್ಯವಿದೆ. 200 ಎಂಎಲ್ ಸ್ಯಾಚೆಟ್ ರಾಗಿ ಅಂಬಲಿ ಬೆಲೆ ಬರೀ 10 ರೂಪಾಯಿ. ರಾಗಿ ಅಂಬಲಿಯ ಟೇಸ್ಟ್ ನೋಡಿದವರು ವಾವ್ ಅಂತಿದ್ದಾರೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿ ಎಲ್ಲಾ ಕಡೆ ನಂದಿನಿ ರಾಗಿ ಅಂಬಲಿ ಲಭ್ಯ ಆಗಲಿದೆ.
ಇದೇ ವೇಳೆ, ಪ್ರೋಬಯೋಟಿಕ್ ಮಜ್ಜಿಗೆಯನ್ನು ಮೈಮುಲ್ ಮಾರುಕಟ್ಟೆಗೆ ಪರಿಚಯಿಸಿದೆ. ಇದು ಕೂಡ ಸಖತ್ ಆಗಿದೆ ಅನ್ನೋದು ಟೇಸ್ಟ್ ನೋಡಿದವರ ಅಂಬೋಣ. ಇದರ ಬೆಲೆ ಕೂಡ 10 ರೂ. ನಿಗದಿ ಮಾಡಲಾಗಿದೆ. ಎರಡು ಕೂಡ ಸೋ ಟೇಸ್ಟಿ.. ಕೊಟ್ಟ ಕಾಸಿಗೆ ಮೋಸವಿಲ್ಲ. ಗುಣಮಟ್ಟಕ್ಕೆ ತಕ್ಕ ಮೌಲ್ಯವನ್ನೇ ಹೊಂದಿದೆ ಅಂತಿದ್ದಾರೆ.
New products by @kmfnandinimilk
Both Probiotic Buttermilk & Ragi Ambali are so tasty & worth the money.
10₹ for 200ml packets.Whoever likes plain Majjige will like Probiotic one , available in Mysuru as of now as its manufactured by MYMUL pic.twitter.com/0VhAQUKPY5
— ರವಿ ಕೀರ್ತಿ ಗೌಡ (@ravikeerthi22) April 10, 2024