ರಾಜಕೀಯ

ನಮ್ಮ ಮೆಟ್ರೋ ಪ್ರಯಾಣ ದರ ಕೊಂಚ ಇಳಿಕೆ; ಎಷ್ಟು ರೂಪಾಯಿ ಕಡಿಮೆ ಆಗಿದೆ?

 

  • ಪ್ರಯಾಣಿಕರ ಆಕ್ರೋಶಕ್ಕೆ ಮಣಿದ BMRCL
  • ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
  • ಇಂದಿನಿಂದ ಪರಿಷ್ಕೃತ ದರ ಜಾರಿ

ಬೆಂಗಳೂರು ಜನರಿಗೆ ಪ್ರಯಾಣಕ್ಕೆ ಅನುಕೂಲವಾಗಿರುವ ನಮ್ಮ ಮೆಟ್ರೋ ಬೆಲೆ ಏರಿಕೆಯಾದ ಹಿನ್ನಲೇ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಮೆಟ್ರೋ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಈ ಬೆನ್ನಲ್ಲೇ BMRCL ಎಂ.ಡಿ. ಮಹೇಶ್ವರ ರಾವ್ ಗುರುವಾರ ಸುದ್ದಿಗೋಷ್ಟಿ ನಡೆಸಿ ಸ್ಟೇಜ್ ಆಧಾರದಲ್ಲಿ ಪ್ರಯಾಣ ದರ ಇಳಿಕೆ ಮಾಡುವದಾಗಿ ತಿಳಿಸಿದ್ದರು. ಅದರಂತೆ ಇಂದಿನಿಂದ ಪ್ರಯಾಣದರ ಕೊಂಚ ಇಳಿಕೆ ಮಾಡಿ ಪರಿಷ್ಕೃತ ದರ ಜಾರಿಯಾಗಿದೆ.

ನಮ್ಮ ಮೆಟ್ರೋ ಪ್ರಯಾಣ ದರ ಕೊಂಚ ಇಳಿಕೆ

 

 

 

 

 

 

 

 

ಮೆಜೆಸ್ಟಿಕ್ To ಬೈಯಪ್ಪನಹಳ್ಳಿ

  • ಏರಿಕೆ ದರ: 60 ರೂಪಾಯಿ
  • ಈಗಿನ ದರ: 50 ರೂಪಾಯಿ

ಮೆಜೆಸ್ಟಿಕ್ To ಸಿಲ್ಕ್ ಇನ್ಸ್ಟಿಟ್ಯೂಟ್

  • ಏರಿಕೆ ದರ: 70 ರೂಪಾಯಿ
  • ಈಗಿನ ದರ: 60 ರೂಪಾಯಿ

ಮೆಜೆಸ್ಟಿಕ್ To ವೈಟ್ ಫೀಲ್ಡ್

  • ಏರಿಕೆ ದರ: 90 ರೂಪಾಯಿ
  • ಈಗಿನ ದರ: 80 ರೂಪಾಯಿ

ಮೆಜೆಸ್ಟಿಕ್ To ಚಲ್ಲಘಟ್ಟ

  • ಏರಿಕೆ ದರ: 70 ರೂಪಾಯಿ
  • ಈಗಿನ ದರ: 60 ರೂಪಾಯಿ

ಮೆಜೆಸ್ಟಿಕ್ To ರೇಷ್ಮೆ ಸಂಸ್ಥೆ

  • ಏರಿಕೆ 70 ರೂಪಾಯಿ
  • ಇಳಿಕೆಯಾಗಿದ್ದು 60 ರೂಪಾಯಿಗೆ

ಮೆಜೆಸ್ಟಿಕ್ To ವಿಧಾನಸೌಧ

  • ಏರಿಕೆ ದರ: 20
  • ಈಗಿನ ದರ: 10 ರೂಪಾಯಿ

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಸಾರ್ವಜಿಕ ವಲಯದಲ್ಲಿ ವಿರೋದ ವ್ಯಕ್ತವಾಗಿತ್ತು. ಅಲ್ಲದೇ ಬಿಜೆಪಿ – ಕಾಂಗ್ರೆಸ್ ದರ ಏರಿಕೆಗೆ ರಾಜಕೀಯವಾಗಿ ಆರೋಪ ಪ್ರತ್ಯಾರೋಪ ನಡೆಸಿದ್ದರು. ಈ ಬೆನ್ನಲ್ಲೇ  ಸಿಎಂ ಸಿದ್ದರಾಮಯ್ಯ ಪ್ರಯಾಣಿಕರ ಹಿತದೃಷ್ಟಿಯಿಂದ ಮೆಟ್ರೋ ದರ ಇಳಿಕೆ ಮಾಡುವಂತೆ BMRCLಗೆ ಸೂಚನೆ ನೀಡಿದ್ದರು.

Comments (0)

Your email address will not be published. Required fields are marked *

Back to top button