Wednesday, April 30, 2025
30.3 C
Bengaluru
LIVE
ಮನೆ#Exclusive NewsTop Newsನಲಪಾಡ್ ಆಪ್ತ, ಅಬ್ಬಾಸ್ ಗ್ಯಾಂಗ್ ನಿಂದ ಗೂಂಡಾಗಿರಿ

ನಲಪಾಡ್ ಆಪ್ತ, ಅಬ್ಬಾಸ್ ಗ್ಯಾಂಗ್ ನಿಂದ ಗೂಂಡಾಗಿರಿ

ಬೆಂಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರು ಸದಾ ಯಾವುದಾದರೊಂದು ವಿವಾದದಲ್ಲಿ ಸಿಲುಕಿ ಹಾಕಿಕೊಂಡಿರುತ್ತೆ. ಇದೀಗ ಅವರ ಆಪ್ತ ಎನ್ನಲಾದ ವ್ಯಕ್ತಿಯೊಬ್ಬ ಗ್ಯಾಂಗ್ ಕಟ್ಟಿಕೊಂಡು ಯುವಕನೊಬ್ಬನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಗ್ಯಾಂಗ್ ನ ಲೀಡರ್ ಅಂತ ಹೇಳಲಾಗ್ತಿರುವ ಅಬ್ಬಾಸ್ ಮತ್ತು ಆತನ ಸಹಚರರು ಯುವಕನಿಗೆ ಅಮಾನುಷವಾಗಿ ಥಳಿಸಿದ್ದಾರೆ.

ಅಬ್ಬಾಸ್ ನಲಪಾಡ್ ಆಪ್ತ ಎಂದು ಹೇಳಲಾಗ್ತಿದೆ. ಮನೆಯೊಂದರ ಕೆಳಗಡೆ ಕಾರು ಪಾರ್ಕಿಂಗ್‌ನಲ್ಲಿ ಈ ಹಲ್ಲೆ ನಡೆದಿದೆ. ಅಬ್ಬಾಸ್, ಸುಲ್ತಾನ್ ಸೇರಿ ನಾಲ್ವರು ಈ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕ ಕಾಲು ಹಿಡಿದು ಕ್ಷಮೆ ಕೇಳಿದರೂ ಹಲ್ಲೆ ಮಾತ್ರ ನಿಲ್ಲಲಿಲ್ಲ. ಯುವಕನ ಕೈ, ಕಾಲು, ತಲೆ ಎಂದು ಎಲ್ಲೆಂದರಲ್ಲಿ ಪೈಪ್‍ನಿಂದ ಹೊಡೆದಿದ್ದಾರೆ ಎನ್ನಲಾಗಿದೆ.

ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.  ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಅಶೋಕ ನಗರ ಪೋಲಿಸರು ಅಬ್ಬಾಸ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments