ಸಾಂಸ್ಕೃತಿಕ ನಗರಿ ಮೈಸೂರು (MysuruCity) ನೋಡೋಕೆ ಚೆಂದ.. ಈ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಕಳೆದ ರಾತ್ರಿ ಮೈಸೂರು ನಗರದಲ್ಲಿ ಉತ್ತಮ ಮಳೆ (RainFall) ಆಗಿದೆ. ಮುಂಜಾನೆ ಕೂಡ ಮಳೆ ತುಂತುರು ಮಳೆ (Mysuru Morning Rain) ಬೀಳುತ್ತಿದೆ. ಮಳೆ ಹನಿಗಳು ಮೈಸೂರು ನಗರದ ಸೌಂದರ್ಯವನ್ನು ನೂರ್ಮಡಿಸಿದೆ.
ಮುಂಜಾವಿನನಲ್ಲಿ ಮೈಸೂರು ನಗರದ ಚಿತ್ರಗಳನ್ನು ಹವ್ಯಾಸಿ ಹವಾಮಾನ ಪರಿವೀಕ್ಷಕರು, ಪರಿಸರ ಪ್ರೇಮಿಯೂ ಆಗಿರುವ ರವಿಕೀರ್ತಿಗೌಡ (#RaviKeertiGowda)ಅವರು ತಮ್ಮ ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾರೆ.
ಮೈಸೂರಿನ ರಾಜಬೀದಿ, ಪ್ರಮುಖ ವೃತ್ತ, ಕುಕ್ಕರಹಳ್ಳಿ ಕೆರೆ (#KukkarahalliLake) ಹೀಗೆ ಹಲವುಗಳನ್ನು ರವಿಕೀರ್ತಿಗೌಡ ಅವರು ಸೆರೆ ಹಿಡಿದು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..
ಮುಂಜಾನೆ ಮಳೆ ಹನಿಗಳನ್ನು ಒಳಗೊಂಡ ಈ ಪಟಗಳನ್ನು ನೋಡಿದರೇ ಮನಸ್ಸಿಗೆ ಆಹ್ಲಾದ ಎನಿಸುತ್ತದೆ. ನೀವು ನೋಡಿ ಎಂಜಾಯ್ ಮಾಡಿ
Mysuru morning rain ☔️☔️#MysuruRains pic.twitter.com/rM1QyKHAU1
— ರವಿ ಕೀರ್ತಿ ಗೌಡ (@ravikeerthi22) May 7, 2024