Top Newsರಾಜಕೀಯವಾಣಿಜ್ಯಹಣಕಾಸು

ಮಲ್ಲೇಶ್ವರಂ ಮೈಸೂರು ಲ್ಯಾಂಪ್ಸ್ ಜಾಗದಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರ!


ಬೆಂಗಳೂರು: ದಶಕಗಳಿಂದ ಬಳಕೆಯಾಗದೆ ಉಳಿದಿದ್ದ ಮಲ್ಲೇಶ್ವರಂನ ಪ್ರಖ್ಯಾತ ಮೈಸೂರು ಲ್ಯಾಂಪ್ಸ್ ಲಿಮಿಟೆಡ್ (Mysore Lamps Limited) ಜಾಗಕ್ಕೆ ಈಗ ಹೊಸ ಕಳೆ ಬಂದಿದೆ. ಈ ಐತಿಹಾಸಿಕ ಆವರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶ ಕೇಂದ್ರ (International Convention Centre) ಸ್ಥಾಪಿಸಲು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಮಹತ್ವದ ತೀರ್ಮಾನ ಪ್ರಕಟಿಸಿದ್ದಾರೆ. ನಗರದ ಹೃದಯಭಾಗದಲ್ಲಿರುವ ಈ ವಿಶಾಲವಾದ ಜಾಗವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ಈ ಬೃಹತ್ ಸಂಕೀರ್ಣವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (PPP Model) ಅಡಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಮಲ್ಲೇಶ್ವರಂ ಮತ್ತು ಸುತ್ತಮುತ್ತಲ ಭಾಗದ ಆರ್ಥಿಕ ಚಟುವಟಿಕೆಗಳಿಗೆ ಇದು ಹೊಸ ವೇಗ ನೀಡಲಿದ್ದು, ಜಾಗತಿಕ ಮಟ್ಟದ ಪ್ರದರ್ಶನಗಳು ಮತ್ತು ಸಮಾವೇಶಗಳಿಗೆ ಇದು ಸೂಕ್ತ ವೇದಿಕೆಯಾಗಲಿದೆ. ಈ ಮೂಲಕ ಮೈಸೂರು ಲ್ಯಾಂಪ್ಸ್‌ನ ಪಾರಂಪರಿಕ ಜಾಗವನ್ನು ಆಧುನಿಕ ಬೆಂಗಳೂರಿನ ಹೆಗ್ಗುರುತಾಗಿ ಪರಿವರ್ತಿಸಲು ಸರ್ಕಾರ ಸಜ್ಜಾಗಿದೆ.

Comments (0)

Your email address will not be published. Required fields are marked *

Back to top button