Thursday, January 29, 2026
22.8 C
Bengaluru
Google search engine
LIVE
ಮನೆ#Exclusive News"ನನ್ನ ಅಪ್ಪ ಹುಲಿಯನ್ನು ಕೊಂದು, ಅದರ ರಕ್ತ ಮೈಮೇಲೆ ಎರಚಿದ್ದರು"- ಯುವರಾಜ್ ಸಿಂಗ್.!

“ನನ್ನ ಅಪ್ಪ ಹುಲಿಯನ್ನು ಕೊಂದು, ಅದರ ರಕ್ತ ಮೈಮೇಲೆ ಎರಚಿದ್ದರು”- ಯುವರಾಜ್ ಸಿಂಗ್.!

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ತಮ್ಮ ಬಾಲ್ಯದಲ್ಲಿ ನಡೆದ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ


ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಕೂಡಾ ತಾವು ಕ್ರಿಕೆಟ್ ಆಡುವ ದಿನಗಳಲ್ಲಿ ಪ್ರತಿಭಾನ್ವಿತ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಹೀಗಿದ್ದೂ ಯೋಗರಾಜ್ ಸಿಂಗ್ ಆಟಗಾರನಾಗಿ ದೊಡ್ಡ ಹೆಸರು ಮಾಡಲು ಸಾಧ್ಯವಾಗಲಿಲ್ಲ. ಯೋಗರಾಜ್ ಸಿಂಗ್, ಟೀಂ ಇಂಡಿಯಾ ಪರ ಒಂದು ಟೆಸ್ಟ್ ಹಾಗೂ ಆರು ಏಕದಿನ ಪಂದ್ಯಗಳನ್ನು ಆಡಲಷ್ಟೇ ಶಕ್ತರಾಗಿದ್ದರು

ಯೋಗರಾಜ್ ಸಿಂಗ್ ಆಟಗಾರನಾಗಿ ಯಶಸ್ಸು ಕಾಣದಿದ್ದರೂ ಓರ್ವ ಕೋಚ್ ಆಗಿ ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಮಗ ಯುವರಾಜ್ ಸಿಂಗ್ ಅವರನ್ನು ಓರ್ವ ಚಾಂಪಿಯನ್ ಆಟಗಾರನಾಗಿ ಬೆಳೆಸುವಲ್ಲಿ ಯೋಗರಾಜ್ ಸಿಂಗ್ ಅವರ ಪಾತ್ರ ದೊಡ್ಡದಿದೆ. ಇದೀಗ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಕೂಡಾ ಯೋಗರಾಜ್ ಸಿಂಗ್ ಅವರ ಗರಡಿಯಲ್ಲೇ ಪಳಗುತ್ತಿದ್ದಾರೆ. ಯೋಗರಾಜ್ ಸಿಂಗ್ ಅವರು ತಮ್ಮದೇ ಆದ ಕ್ರಿಕೆಟ್ ಅಕಾಡೆಮಿಯನ್ನು ಹೊಂದಿದ್ದು, ತಮ್ಮಲ್ಲಿ ಅಭ್ಯಾಸ ಮಾಡುತ್ತಿರುವ ಯುವ ಕ್ರಿಕೆಟ್ ಆಟಗಾರರಿಗೆ ಕಠಿಣ ಪರಿಶ್ರಮದೊಂದಿಗೆ ಸಜ್ಜುಗೊಳಿಸುತ್ತಿದ್ದಾರೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments