
ಬೆಂಗಳೂರು: ಕರ್ನಾಟಕ ಬಜೆಟ್ 2026 ಮಂಡನೆಗೂ ಮುನ್ನ ಸಿಎಂ ಸಿದ್ದರಾಮಯ್ಯ ರಾಹುಕಾಲ ನೋಡಿಕೊಂಡು ಸಮಯ ನಿಗದಿ ಮಾಡಿದ್ದರು. ಪ್ರತಿಪಕ್ಷ ನಾಯಕರ ಟೀಕೆ ವಿಧಾನಸಭೆಯಲ್ಲಿ ಸ್ವಾರಸ್ಯಕರ ಚರ್ಚೆಗೆ ನಾಂದಿಹಾಡಿತು. ಈ ವಿಚಾರವಾಗಿ, ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಪ್ರಸ್ತಾಪಿಸಿದರು. ಅದಕ್ಕುತ್ತರಿಸಿದ ಸಿದ್ದರಾಮಯ್ಯ, ಅಧಿಕಾರಿಗಳು ಹಾಗೂ ಮನೆಯವರ ಮಾತು ಕೇಳಿ ರಾಹುಕಾಲ ನೋಡಿದ್ದು ನಿಜ. ವೈಯಕ್ತಿಕವಾಗಿ ರಾಹುಕಾಲ, ಗುಳಿಕಕಾಲ ಅಥವಾ ಯಾವುದೇ ರೀತಿಯ ಗ್ರಹಣ ಕಾಲಗಳಲ್ಲಿ ನಂಬಿಕೆಯಿಲ್ಲ.
ಅಲ್ಲದೆ, ‘ಯುಗಾದಿ ದಿನ ಹಾಗೂ ಶಿವರಾತ್ರಿ ದಿನ ಯಾರಾದರೂ ಮಾಂಸ ಸೇವನೆ ಮಾಡುತ್ತಾರಾ? ನಾನು ತಿನ್ನುತ್ತೇನೆ, ನನ್ನಿಷ್ಟ’. ಈ ಹಿಂದೆ ಹಲವು ಬಾರಿ ರಾಹುಕಾಲದಲ್ಲೇ ಬಜೆಟ್ ಮಂಡಿಸಿದ್ದ ಉದಾಹರಣೆಗಳನ್ನೂ ಸಿದ್ದರಾಮಯ್ಯ ಅವರು ನೀಡಿದ್ದಾರೆ.




