ಸಂಗೀತ ಮಾಂತ್ರಿಕ ಎಂದೇ ಹೆಸರಾಗಿರುವ ರಾಜ್ಯಸಭಾ ಸಂಸದ ಇಳಯರಾಜಗೆ ದೇಗುಲದಲ್ಲಿ ಅಪಮಾನ ಆಗಿದೆ. ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂ ಆಂಡಾಳ್ ದೇವಸ್ಥಾನಕ್ಕೆ ಹಿಂದೂ ಧಾರ್ಮಿಕ-ದತ್ತಿ ಇಲಾಖೆ ಅಧಿಕಾರಿಗಳು ಬರಮಾಡಿಕೊಂಡರು. ಈ ವೇಳೆ ಆಂಡಾಳ್ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿರುವ ಅರ್ಧ ಮಂಟಪಕ್ಕೆ ಪ್ರವೇಶಿಸಲು ಯತ್ನಿಸಿದಾಗ ಅಧಿಕಾರಿಗಳು, ಅರ್ಚಕರು, ಭಕ್ತರು ತಡೆದು ಹೊರ ಕರೆತಂದಿದ್ದಾರೆ ಎಂದು ಗೊತ್ತಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ.

ತಮಿಳುನಾಡಿನ ಶ್ರೀವಿಲ್ಲಿಪುತ್ತೂರ್ ಆಂಡಾಳ್ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇಳಯರಾಜ ಅವರನ್ನು ದೇವಸ್ಥಾನದ ಒಳಗೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ. ಇತ್ತೀಚಿಗೆ ಇಳಿಯರಾಜ ಅವರು ಶ್ರೀವಿಲ್ಲಿಪುತ್ತೂರಿನ ಆಂಡಾಳ್ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರನ್ನು ಅಲ್ಲಿನವರು ಹೂಮಾಲೆ ಹಾಕಿ ಸ್ವಾಗತಿಸಿದ್ದಾರೆ.

ಆದರೆ ಇಳಿಯರಾಜ ಅವರು ದೇವಸ್ಥಾನದ ಒಳಗೆ ದೇವರನ್ನು ಪ್ರಾರ್ಥಿಸಲು ಮುಂದೆ ಹೋದಾಗ ಅವರನ್ನು ಅಲ್ಲಿನ ಅರ್ಚಕರು ತಡೆದಿದ್ದಾರೆ ಎಂದು ವರದಿಯಾಗಿದೆ. ದೇವಸ್ಥಾನದಲ್ಲಿ ಪ್ರೋಟೋಕಾಲ್ ಬಗ್ಗೆ ಸ್ಪಷ್ಟನೆ ನೀಡಿದ್ದು, ಅರ್ಚಕರು ಮತ್ತು ಜೀಯರ್ ಹೊರತುಪಡಿಸಿ ಗರ್ಭಗುಡಿಗೆ ಹೋಗುವ ಒಳಗಿನ ಕೋಣೆಗೆ ಬೇರೆ ಯಾರಿಗೂ ಪ್ರವೇಶವಿಲ್ಲ ಎಂದು ತಿಳಿದುಬಂದಿದೆ.

ಜಾತಿ ಕಾರಣಕ್ಕೆ ಪ್ರವೇಶ ನಿರಾಕರಣೆ ವದಂತಿ : ಈ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅಲ್ಲದೆ ಜಾತಿ ಕಾರಣಕ್ಕೆ ಇಳಿಯರಾಜ ಅವರನ್ನು ದೇಗುಲ ಪ್ರವೇಶಿದಂತೆ ತಡೆಯಲಾಗಿದೆ ಎಂದು ಸೋಶಿಯಲ್ ಮಿಡಿಯಾದಲ್ಲಿ ಸುದ್ದಿ ಹಬ್ಬಿತ್ತು. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಸಮಾಜ ಕಲ್ಯಾಣ ಸಚಿವರಾದ ಎಚ್.ಸಿ. ಮಹದೇವಪ್ಪ ಕೂಡ ಖಂಡನೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಸಂಗೀತ ಮಾಂತ್ರಿಕ, ಹಾಲಿ ರಾಜ್ಯಸಭಾ ಸದಸ್ಯರಾದ ಇಳಿಯರಾಜ ಅವರನ್ನು ತಮಿಳುನಾಡಿ ದೇವಸ್ಥಾನವೊಂದರಲ್ಲಿ ಪ್ರವೇಶ ಮಾಡಲು ನಿರಾಕರಿಸಿದ ಘಟನೆ ನಿಜಕ್ಕೂ ಅವಮಾನಕರ ಸಂಗತಿ, ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯು ಇನ್ನೂ ಜೀವಂತವಾಗಿದೆ ಎಂಬುದನ್ನು ಸಾರಿ ಹೇಳುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ, ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಗಳಿಸಿದವರ ಸ್ಥಿತಿಯೇ ಹೀಗಿದ್ದರೆ, ಸಾಮಾನ್ಯರಾಗಿ ಜೀವಿಸುವ ಪರಿಶಿಷ್ಟ ಸಮುದಾಯಗಳ ಪರಿಸ್ಥಿತಿ ಏನಾಗಿರಬೇಕು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಮಹದೇವಪ್ಪ ಕೂಡ ಖಂಡಿಸಿದ್ದಾರೆ.

ಈ ವಿಚಾರದ ಬಗ್ಗೆ ಸುದ್ದಿ ಹರಿದಾಡಿದ್ದರಿಂದ ಹಲವು ಕಥಗಳನ್ನು ಕಟ್ಟಲಾಗಿತ್ತು. ಈ ಬಗ್ಗೆ ದೇವಸ್ಥಾನದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಶ್ರೀವಿಲ್ಲಪುತ್ತೂರ್ ಆಂಡಾಳ್ ದೇವಸ್ಥಾನದ ಸಂಪ್ರದಾಯದಂತೆ ಅರ್ಚಕರು, ಮಠಾಧೀಶರು ಸೇರಿದಂತೆ ಸಿಬ್ಬಂದಿಗೆ ಮಾತ್ರವೇ ಗರ್ಭಗುಡಿ ಅಥವಾ ಮಂಟಪದ ಬಳಿ ಪ್ರವೇಶಕ್ಕೆ ಅವಕಾಶವಿದೆ. ಈ ಕಾರಣದಿಂದಷ್ಟೇ ಇಳಿಯರಾಜ ಅವರನ್ನು ತಡೆಯಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇಳಿಯರಾಜ ಜಾತಿ ವಿಚಾರವಾಗಿಯೂ ಎಲ್ಲೆಡೆ ಗಾಳಿ ಸುದ್ದಿಗಳು ಹರಿದಾಡಿದ್ದರಿಂದ ಖುದ್ದು ಇಳಿಯರಾಜ ಅವರೇ ಎಲ್ಲದಕ್ಕೂ ಸ್ಪಷ್ಟನೆ ನೀಡಿ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನ ವಿಚಾರವಾಗಿ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ನಾನು ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ನನ್ನ ಸ್ವಾಭಿಮಾನವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಲ್ಲ. ನನ್ನ ವಿಚಾರದಲ್ಲಿ ನಡೆಯದೇ ಇರುವ ಘಟನೆಯನ್ನು ನಡೆದಿದೆ ಎನ್ನುವಂತೆ ಬಿಂಬಿಸಲಾಗಿದೆ. ನನ್ನ ಅಭಿಮಾನಿಗಳು ಹಾಗೂ ಜನರು ಈ ವದಂತಿಗಳನ್ನು ನಂಬಬೇಡಿ ಎಂದು ಇಳಿಯರಾಜ ಸ್ಪಷ್ಟನೆ ನೀಡಿದ್ಧಾರೆ

By Veeresh

Leave a Reply

Your email address will not be published. Required fields are marked *

Verified by MonsterInsights