ವಿಜಯಪುರ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಬುಧವಾರ ರಾತ್ರಿ ಬಾಗಪ್ಪನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ಈಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ವಿಜಯಪುರ ಎಸ್ ಪಿ ಲಕ್ಷ್ಮಣ ನಿಂಬರಗಿ ಅವರು, ಭಾಗಪ್ಪ ಹತ್ಯೆ ಪ್ರಕರಣದ ಸಂಬಂಧ ಇಂಡಿ ತಾಲೂಕಿನ ಅಗರಖೇಡ ಗ್ರಾಮದ 4 ಜನರನ್ನ ಬಂಧಿಸಲಾಗಿದೆ. ಪಿಂಟ್ಯಾ ಅಲಿಯಾಸ್ ಪ್ರಕಾಶ್, ರಾಹುಲ್, ಸುದೀಪ್ ಕಾಂಬಳೆ ಹಾಗೂ ಮಣಿಕಂಠ ಬೆನಕೊಪ್ಪ ಬಂಧಿತ ಆರೋಪಿಗಳು.
ಕೃತ್ಯಕ್ಕೆ ಬಳಸಿದ ಆಟೋ, ಬೈಕ್ ಸೇರಿದಂತೆ ಹಲವು ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ. ಪಿಸ್ತೂಲ್ ಬಳಸಿ ಗುಂಡು ಹಾರಿಸಿ, ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆಸ್ತಿ ವಿಚಾರವಾಗಿ ರವಿ ಅಗರಖೇಡ ಹಾಗೂ ಭಾಗಪ್ಪ ನಡುವೆ ಗಲಾಟೆ ನಡೆದಿತ್ತು. ಇದೇ ಕಾರಣಕ್ಕಾಗಿ ಬಾಗಪ್ಪನ ಶಿಷ್ಯಂದಿರು ರವಿಯನ್ನ ಹತ್ಯೆ ಮಾಡಿದ್ದರು. ರವಿ ಹತ್ಯೆಗೆ ಬಾಗಪ್ಪನನ್ನು ಕೊಲ್ಲುವ ಮೂಲಕ ಪಿಂಟ್ಯಾ ಅಲಿಯಾಸ್ ಪ್ರಕಾಶ ಸೇಡು ತೀರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.