ಶಾಸಕ ಮುನಿರತ್ನ ವಿರುದ್ಧ ಕೇಳಿ ಬಂದಿರುವ ಹನಿಟ್ರ್ಯಾಪ್, ಅತ್ಯಾಚಾರ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ, ಸಂತ್ರಸ್ತೆಯ ಹೇಳಿಕೆ ಮೇರೆಗೆ ಕೆಲ ಪ್ರಭಾವಿಗಳಿಗೆ ಶೀಘ್ರದಲ್ಲೇ ನೋಟಿಸ್ ಕೊಟ್ಟು, ಬುಲಾವ್ ನೀಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಶಾಸಕ ಮುನಿರತ್ನ ವಿರುದ್ಧ ದೂರು ನೀಡಿರುವ ಸಂತ್ರಸ್ತೆಯು ಎಸ್‌ಐಟಿ ವಿಚಾರಣೆ ವೇಳೆ ಮುನಿರತ್ನಗೆ ಕೆಲವು ಪ್ರಭಾವಿಗಳು ಸಾಥ್ ನೀಡಿರುವ ಕುರಿತು ಮಾಹಿತಿ ನೀಡಿದ್ದಾಳೆ. ಮುನಿರತ್ನ ನಡೆಸಿದ್ದಾರೆ. ಎನ್ನಲಾದ ಹನಿಟ್ರ್ಯಾಪ್ನಲ್ಲಿ ಕೆಲ ಅಧಿಕಾರಿಗಳು, ಮಾಜಿ ಕಾರ್ಪೊರೇಟರ್ಗಳು ಹಾಗೂ ಸ್ಥಳೀಯ ರಾಜಕಾರಣಿಗಳು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ಕೆಲವು ಪ್ರಭಾವಿಗಳನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲು ತೆರೆ ಮರೆಯಲ್ಲಿ ಸಿದ್ಧತೆ ನಡೆಸುತ್ತಿ ದ್ದಾರೆ.
ಶೀಘ್ರದಲ್ಲೇ ಆ ಪ್ರಭಾವಿಗಳಿಗೆ ಎಸ್‌ಐಟಿ ನೋಟಿಸ್ ನೀಡಿ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿಸುವ ಸಾಧ್ಯತೆಗಳಿವೆ. ಮುನಿರತ್ನ ಮೊಬೈಲ್‌ಗಾಗಿ ಶೋಧ ನಡೆದಿದ್ದು, ಸಂತ್ರಸ್ತೆಯಿಂದ ಎಸ್ಐಟಿ ಅಧಿಕಾರಿಗಳು ದಾಖಲೆ ಕಲೆಹಾಕಿದ್ದು, ಹೇಳಿಕೆ ಪಡೆದಿದ್ದಾರೆ. ಸಾಕ್ಷ್ಯಗಳು ಕೈಸೇರಿವೆ.