Friday, September 12, 2025
26.7 C
Bengaluru
Google search engine
LIVE
ಮನೆ#Exclusive NewsTop Newsನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ: ಕರ್ನಾಟಕದಲ್ಲಿ ಇನ್ನೊಬ್ಬ ಅರೆಸ್ಟ್‌

ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ: ಕರ್ನಾಟಕದಲ್ಲಿ ಇನ್ನೊಬ್ಬ ಅರೆಸ್ಟ್‌

ರಾಯಚೂರು: ಬಾಲಿವುಡ್​ ನಟ ಸಲ್ಮಾನ್ ಖಾನ್​ಗೆ ಹಾಡಿನ ಮೂಲಕ ಜೀವಬೆದರಿಕೆ ಹಾಕಿದ್ದ ಯುವಕನನ್ನ ಮುಂಬೈ ಪೊಲೀಸರು, ಮಾನ್ವಿ ಪಟ್ಟಣದಲ್ಲಿ ಅರೆಸ್ಟ್ ಮಾಡಿದ್ದಾರೆ.

ಮಾನ್ವಿ ಪಟ್ಟಣದ ಗ್ಯಾರೇಜ್​​ ಮೆಕಾನಿಕ್ ಸೋಹೆಲ್ ಪಾಶಾ (24) ಬಂಧನ. ಮುಂಬೈನ ವರ್ಲಿ ಅಪರಾಧ ವಿಭಾಗದ ಪೊಲೀಸರು ಹಾಡಿನ ಮೂಲಕ ಜೀವ ಬೆದರಿಕೆ ಹಾಕಿದ್ದ ಯುವಕನಿಗಾಗಿ ರಾಯಚೂರಿನ ಮಾನ್ವಿಗೆ ಆಗಮಿಸಿದ್ದರು. ಈ ಸಂಬಂಧ ಹುಡುಕಾಟ ನಡೆಸಿ ಯುವಕನನ್ನು ಪಟ್ಟಣದಲ್ಲಿ ಬಂಧಿಸಿ, ಕರೆದೊಯ್ದಿದ್ದಾರೆ.

ಬಿಷ್ಟೋಯಿ ಹೆಸರಲ್ಲಿ ಸಲ್ಮಾನ್ ಖಾನ್‌ ಗೆ ಬೆದರಿಕೆ ಹಾಕಿ ಕರ್ನಾಟಕದಲ್ಲಿ ಬಂಧನಕ್ಕೆ ಒಳಗಾದ 2ನೇ ವ್ಯಕ್ತಿ ಸುಹೇಲ್. ಸಲ್ಮಾನ್ ಖಾನ್ ಗೆ ಪ್ರತ್ಯೇಕವಾಗಿ ಬೆದರಿಕೆ ಹಾಕಿದ್ದ ರಾಜಸ್ಥಾನ ಮೂಲದ ಭಿಕಾರಾಂ ಜಲಾರಾಂ ಎಂಬಾತನನ್ನು ಕಳೆದ ಮಂಗಳವಾರ ಹಾವೇರಿಯಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು.

ಸೋಹೆಲ್ ಪಾಶಾ ಹವ್ಯಾಸಿ ಹಾಡುಗಾರನಾಗಿದ್ದು ತನ್ನ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲು ಈ ಕೃತ್ಯ ಎಸಗಿದ್ದನು ಎನ್ನಲಾಗಿದೆ. ತನ್ನ ಹೊಸ ಹಾಡು ಮೈ ಸಿಕಂದರ್‌ ಹೂಂ ಜನಪ್ರಿಯಗೊಳಿಸಲು ಹೀಗೆ ಮಾಡಿರುವುದಾಗಿ ಯುವಕ ಒಪ್ಪಿಕೊಂಡಿದ್ದಾನೆ. ವೆಂಕಟ ನಾರಾಯಣ ಎಂಬ ಅಮಾಯಕ ವ್ಯಕ್ತಿಯ ಮೊಬೈಲ್‌ ಬಳಸಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಇದೀಗ ತನಗೆ ತಾನೇ ಸಮಸ್ಯೆಗೆ ಸಿಲುಕಿಕೊಂಡಿದ್ದಾನೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments