ಸಾಲು ಸಾಲು ದುರಂತ ಬಳಿಕ ಎಚ್ಚೆತ್ತುಕೊಂಡ ಬಿಬಿಎಂಪಿ ಕೊನೆಗೂ ಬೆಂಗಳೂರು ನಗರದಲ್ಲಿ ಮಗರಗಳ ಗಣತಿಗೆ ಮುಂದಾಗಿದೆ. ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಉಳಿದಿರುವ ಮರಗಳು ಎಷ್ಟು..?,ಡೇಂಜರ್ ಮರಗಳು ನಗರದ ವಾರ್ಡ್ ಗಳಲ್ಲಿ ಎಷ್ಟಿವೆ..? ಈ ಎಲ್ಲ ಮರಗಳ ಗಣತಿಗೆ ಬೆಂಗಳೂರು ಮಹಾನಗರ ಪಾಲಿಕೆ ಸಜ್ಜಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನೇ ದಿನೇ ವೃಕ್ಷ ಸಂತತಿ ಸಹ ಕ್ಷೀಣಿಸುತ್ತಿದ್ದು,ಹಲವು ವರ್ಷಗಳ ಬಳಿಕ ವೃಕ್ಷ ಗಣತಿ ಕಾರ್ಯಕ್ಕೆ ಪಾಲಿಕೆ ಚಾಲನೆ ನಿಡಿದೆ. ಪ್ರತಿ ರಸ್ತೆಗಳಲ್ಲಿರುವ ಮರಗಳನ್ನ ಲೆಕ್ಕ ಹಾಕಲಿರುವ ಪಾಲಿಕೆ,ಪ್ರತಿ ಮರದ ವಯಸ್ಸೆಷ್ಟು,ಅವುಗಳ ಸದೃಢತೆ ಏನು ಅನ್ನೋದರ ಲೆಕ್ಕ ಪಾಲಿಕೆ ಪಡೆಯಲಿದೆ…