ದೇಶ/ವಿದೇಶ

ಅಂಬಾನಿ ಮನೆಯಲ್ಲಿ ಎಸಿನೆ ಇಲ್ಲ..! – ವಾಯುದೇವನೇ ನೆಲೆಸಿದ್ದಾನಾ..?

ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಮುಕೇಶ್ ಅಂಬಾನಿ ಟಾಪ್ ಸ್ಥಾನದಲ್ಲಿದ್ದಾರೆ. ಅಂಬಾನಿಯವರ 15 ಸಾವಿರ ಕೋಟಿ ವೆಚ್ಚದ ಐಷಾರಾಮಿ ಮನೆಯಲ್ಲಿ ಸಾಕ್ಷಾತ್ ಕುಬೇರನೇ ನೆಲೆಸಿದ್ದಾನೆ. ಮುಂಬೈನಲ್ಲಿರುವ ಅಂಬಾನಿಯ 27 ಅಂತಸ್ತಿನ ಮನೆ ಅಂಟಿಲಿಯಾ.. ಇದು ವಿಶ್ವದ ಅತ್ಯಂತ ದುಬಾರಿ ಮನೆಯಲ್ಲಿ ಒಂದಾಗಿದೆ. ಈ ಅಂಟಿಲಿಯಾ ಮನೆ ಹಲವು ಕಾರಣಗಳಿಗೆ ಆಗಾಗಕ್ಕೆ ಸುದ್ದಿಯಲ್ಲಿರುತ್ತೆ. ಟೆರೇಸ್ ಗಾರ್ಡನ್, ಈಜುಕೊಳ, ಸ್ಪಾ, ಸ್ನೋ ರೂಂ, ಸಿನಿಮಾ ಹಾಲ್ ಹೀಗೆ ಎಲ್ಲ ಸೌಲಭ್ಯಗಳೂ ಇಲ್ಲಿದೆ.. ಇಷ್ಟೆಲ್ಲಾ ಐಷಾರಾಮಿ ಆಗಿರೋ ಈ ಅಂಟಿಲಿಯಾದಲ್ಲಿ ಒಂದೇ ಒಂದು ಎಸಿ ಇಲ್ವಂತೆ… ಅರೆ ಕುಬೇರ ಅಂಬಾನಿ ಮನೆಯಲ್ಲಿ ಒಂದೇ ಒಂದು ಏರ್ ಕಂಡೀಷನರ್ ಇಲ್ವಾ? ನಿಜಕ್ಕೂ ಅವ್ರ ಮನೆಯಲ್ಲಿ ಒಂದೂ ಎಸಿ ಇಲ್ಲ.. ಇಂಥದ್ದೊಂದು ವಿಚಾರ ಈಗ ಬಹಿರಂಗವಾಗಿದೆ.

ಮುಕೇಶ್ ಅಂಬಾನಿಯವರು 15ಸಾವಿರ ಕೋಟಿ ಬೆಲೆಯ ಅಂಟಿಲಿಯಾದಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಆದರೂ ಬಿರುಬಿಸಿಲಿನ ಮುಂಬೈನಲ್ಲಿ ಅಂಟಿಲಿಯಾ ಮನೆಯಲ್ಲಿ ಎಸಿ ಇಲ್ಲದೆ ಹೇಗೆ ವಾಸವಾಗಿದ್ದಾರೆ ಅನ್ನೋ ಪ್ರಶ್ನೆ ಉದ್ಭವಿಸುತ್ತೆ.. ಅಂಟಿಲಿಯಾದಲ್ಲಿ ಸಾಮಾನ್ಯರು ಬಳಸೋ ಸಾಂಪ್ರದಾಯಿಕ ಎಸಿ ಇಲ್ವೇ ಇಲ್ಲ. ಅದರ ಬದಲಿಗೆ ಅಂಟಿಲಿಯಾವನ್ನ ಕೂಲ್ ಆಗಿಸಲು ಬೇರೆಯದ್ದೇ ಟೆಕ್ನಾಲಜಿ ಬಳಕೆ ಆಗಿದೆ.. ಎಲೆಕ್ಟ್ರಾನಿಕ್ ಎಸಿ ಬದಲು ಮನೆಯನ್ನ ಕೂಲ್ ಆಗಿಸಲು ನೈಸರ್ಗಿಕ ತಂತ್ರ ಬಳಸಲಾಗಿದೆಯಂತೆ

ಅಂಟಿಲಿಯಾದಲ್ಲಿ ಎಸಿ ಇಲ್ಲದ ಕಾರಣ ತಾಪಮಾನ ಕಡಿಮೆ ಮಾಡಬೇಕೆಂದ್ರೂ ಆಗಲ್ಲ, ಜಾಸ್ತಿ ಮಾಡಬೇಕಂದ್ರೂ ಆಗಲ್ಲ. ಯಾಕಂದ್ರೆ ಅಂಟಿಲಿಯಾದ ಒಳಭಾಗವನ್ನ ಅಮೃತಶಿಲೆಯಿಂದ ಮಾಡಲಾಗಿದೆ. ಹಾಗೇ ಅವರ ಮನೆಯಲ್ಲಿ ಕೆಲವೊಂದಿಷ್ಟು ಹೂವಿನ ಗಿಡಗಳನ್ನ ಬೆಳೆಸಲಾಗಿದೆ.. ಈ ಅಮೃತಶಿಲೆ ಮತ್ತು ಹೂವುಗಳು, ಕೆಲ ಸಸ್ಯ ಪ್ರಬೇಧಗಳು ಮನೆಯ ವಾತಾವರಣ ಕಂಟ್ರೋಲ್ ಮಾಡ್ತಿವೆ..

ಕೆಲ ದಿನಗಳ ಹಿಂದೆ ಅಂಟಿಲಿಯಾದಲ್ಲಿ ನಟಿ ಶ್ರೇಯಾ ಧನ್ವಂತರಿ ಸೇರಿ 50 ಮಾಡೆಲ್​​​​ಗಳು ಅಂಟಿಲಿಯಾಗೆ ಹೋಗಿದ್ದರಂತೆ. ಅಲ್ಲಿ ವಿಪರೀತ ಚಳಿ ಇತ್ತಂತೆ.. ಆಗ ಕಟ್ಟಡ ವ್ಯವಸ್ಥಾಪಕರಿಗೆ ಎಸಿ ಹೆಚ್ಚಿಸಿ ಅಂತ ಕೇಳಿಕೊಂಡ್ರಂತೆ.. ಆಗ ಕಟ್ಟಡ ವ್ಯವಸ್ಥಾಪಕರು, ನಮ್ಮ ಅಂಟಿಲಿಯಾದಲ್ಲಿ ಎಸಿಯೇ ಇಲ್ಲ, ವಾತಾವರಣವನ್ನ ಹೆಚ್ಚಿಸಲು, ಕಡಿಮೆ ಮಾಡಲು ಸಾಧ್ಯವೇ ಇಲ್ಲ ಅಂದಿದ್ದಾರೆ. ಇದಾದ ಬಳಿಕವೇ ಅಂಬಾನಿ ಮನೆಯಲ್ಲಿ ಎಸಿ ಇಲ್ಲ, ನೈಸರ್ಗಿಕವಾಗಿ ಅಮೃತಶಿಲೆಗಳೇ ಮನೆಯೊಳಗಿನ ವಾತಾವರಣವನ್ನ ಕಂಟ್ರೋಲ್ ಮಾಡ್ತಿವೆ ಎಂಬುದು ಗೊತ್ತಾಗಿದೆ.

 

Comments (0)

Your email address will not be published. Required fields are marked *

Back to top button