#Exclusive NewsTop Newsರಾಜಕೀಯವಿಶೇಷಸುದ್ದಿ

ಮುಡಾ ಮಾಜಿ ಆಯುಕ್ತ ನಟೇಶ್​ ED ವಶಕ್ಕೆ !

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮುಡಾ ಮಾಜಿ ಆಯುಕ್ತ ನಟೇಶ್​ ಅವರನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಗೆ ಸಹಕರಿಸದ ಹಿನ್ನೆಲೆಯಲ್ಲಿ ನಟೇಶ್​ ಅವರನ್ನು ವಶಕ್ಕೆ ಪಡೆದ ಇಡಿ ತನಿಖಾಧಿಕಾರಿಗಳು ಶಾಂತಿನಗರದಲ್ಲಿರುವ ಕಚೇರಿಗೆ ಕರೆದೊಯ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ನಿನ್ನೆ ಬೆಳಗ್ಗೆ ಮುಡಾ ಮಾಜಿ ಆಯುಕ್ತ ನಟೇಶ್​ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳ ತಂಡ 33 ಗಂಟೆಗಳ ಕಾಲ ಸುದೀರ್ಘ ಪರಿಶೀಲನೆ ನಡೆಸಿದ್ದರು. ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಡಾ ಮಾಜಿ ಆಯುಕ್ತ ನಟೇಶ್​ ಹಾಗೂ ನಂದೀಶ್​ ಪಾತ್ರವಿರುವ ಬಗ್ಗೆ ಫ್ರೀಡಂ ಟಿವಿ ದಾಖಲೆ ಸಮೇತ ವಿಸ್ತೃತ ಸುದ್ದಿ ಪ್ರಸಾರ ಮಾಡಿತ್ತು.

 

Comments (0)

Your email address will not be published. Required fields are marked *

Back to top button