ದಾವಣಗೆರೆ: ಕೇಂದ್ರ ಸರಕಾರವು ಶಿಕ್ಷಣ ಸಚಿವಾಲಯಕ್ಕಾಗಿ ಸಲಹಾ ಸಮಿತಿಯನ್ನು ರಚನೆ ಮಾಡಿದ್ದು, ಈ ಸಮಿತಿಗೆ ಸದಸ್ಯರಾಗಿ ಕರ್ನಾಟಕದಿಂದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರನ್ನು ನೇಮಿಸಲಾಗಿದೆ. ರಾಜ್ಯದ ಲೋಕಸಭಾ ಸದಸ್ಯರ ಪೈಕಿ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ನೇಮಕ ಮಾಡಲಾಗಿರುವುದು ವಿಶೇಷ. ಸಮಿತಿಗೆ ಕೇಂದ್ರ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್, ಶಿಕ್ಷಣ ಸಚಿವಾಲಯದ ರಾಜ್ಯ ಸಚಿವರಾದ ಜಯಂತ್ ಚೌಧರಿ ಹಾಗೂ ಕೌಶಲ್ಯ ಅಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ರಾಜ್ಯ ಸಚಿವರಾದ ಮಜುಂದಾರ್ ಅವರುಗಳು ಅಧ್ಯಕ್ಷರಾಗಿದ್ದಾರೆ. ಈ ಸಮಿತಿಯಲ್ಲಿ 8 ಲೋಕಸಭಾ ಸದಸ್ಯರು ಹಾಗೂ ಎಂಟು ರಾಜ್ಯ ಸಭಾ ಸದಸ್ಯರು ನೇಮಕಗೊಂಡಿದ್ದಾರೆ ಹಾಗೂ ಇಬ್ಬರು ಪದನಿಮಿತ್ತ ಸದಸ್ಯರುಗಳಿದ್ದಾರೆ. ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಆರೋಗ್ಯ ಸಮಿತಿಯ ಜತೆಯಲ್ಲಿ ಶಿಕ್ಷಣ ಸಮಿತಿಗೂ ಸದಸ್ಯರಾಗಿರುವುದು ವಿಶೇಷವಾಗಿದೆ.


