ಇದೀಗ ಸಂಸದರೂ ಆಗಿರುವಂತಹ ಡಾ. ಮಂಜುನಾಥ್ ತಮ್ಮ ಹೃದಯವಂತಿಕೆ, ಮಾನವೀಯ ಗುಣ, ಜನಪರ ಕಾಳಜಿ ಮೂಲಕವೇ ಗಮನ ಸೆಳೆದವವರು. ಇಂದಿಗೂ ತಮ್ಮ ಸರಳತೆಯಿಂದಲೇ ಹೃದಯವಂತ ಡಾ. ಮಂಜುನಾಥ್ ಸುದ್ದಿಯಲ್ಲಿರುತ್ತಾರೆ. ಇದೀಗ ಇವರು ಮತ್ತೊಮ್ಮೆ ಸುದ್ದಿಯಲ್ಲಿದ್ದು, ಗಣೇಶ ಕೂರಿಸಲು ಹಣ ಕೇಳಿದ್ರೆ ಮುಖ ತಿರುಗಿಸಿ ಹೋಗುವವರ ಮಧ್ಯೆ ಡಾ. ಮಂಜುನಾಥ್ ಅವರು ತಮ್ಮ ಬಳಿ ಗಣೆಶ ಕಲೆಕ್ಷನ್‌ಗೆ ಬಂದ ಮಕ್ಕಳ ಜೊತೆ ಮೃದುವಾಗಿ ಮಾತನಾಡಿ ಹಣ ಕೊಟ್ಟು ಕಳುಹಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಗೌರಿ ಗಣೇಶ ಹಬ್ಬ ಬಂದೇ ಬಿಟ್ಟಿದೆ. ದೇಶದೆಲ್ಲೆಡೆ ಗಲ್ಲಿ ಗಲ್ಲಿಗಳಲ್ಲೂ ಗಣೇಶನನ್ನು ಕೂರಿಸಿ ಬಹಳ ವಿಜೃಂಭಣೆಯಿಂದ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನೂ ಸಾವರ್ಜನಿಕ ಗಣೇಶೋತ್ಸವ ಸಂದರ್ಭದಲ್ಲಿ ಚಂದಾ ವಸೂಲಿ ಮಾಡುವುದು ಸಾಮಾನ್ಯ. ಅದರಲ್ಲೂ ಮಕ್ಕಳಂತೂ ಬಹಳ ಉತ್ಸಾಹದಿಂದ ಮನೆ ಮನೆಗಳಿಗೆ, ಹೋಗಿ ಗಲ್ಲಿ ಗಲ್ಲಿಗಳಲ್ಲೂ ತಿರುಗಾಡುತ್ತಾ ಗಣೇಶ ಕಲೆಕ್ಷನ್ ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಂದು ಮಕ್ಕಳ ಸೈನ್ಯ ಈ ಬಾರಿ ಗಣೇಶ ಕೂರಿಸಲು ಸಂಸದ ಡಾ. ಮಂಜುನಾಥ್ ಅವರ ಬಳಿಯೇ ಹಣ ಕೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.