ಬೇಕಾಬಿಟ್ಟಿ ರೂಲ್ಸ್ ಬ್ರೇಕ್ ಮಾಡಿದ್ರೆ ಇನ್ಮೆಲೆ ಕೇಸ್ ಬೀಳುತ್ತೆ. ರೂಲ್ಸ್ ಬ್ರೇಕ್ ಮಾಡೋರ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿದ್ದು, ಟ್ರಾಫಿಕ್ ಪೊಲೀಸರು ಮಾತ್ರವಲ್ಲ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಕಾರ್ಯಾಚರಣೆ
ರೂಲ್ಸ್ ಬ್ರೇಕ್ ಮಾಡೋರನ್ನ ಹಿಡಿಯೋಕೆ ಸಾರಿಗೆ ಇಲಾಖೆ ಮಾಸ್ಟರ್ ಪ್ಲಾನ್ ಕೂಡ ಮಾಡಿದೆ. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರ ಜಾತಕ ಬಿಚ್ಚಿಡಲು RTO ತಂತ್ರಜ್ಞಾನ ಮೊರೆ ಹೋಗಿದೆ. ರೂಲ್ಸ್ ಫಾಲೋ ಮಾಡದವರ ಗ್ರಹಚಾರ ಬಿಡಿಸೋಕೆ ಎಐ ಕ್ಯಾಮರಾ ಅಳವಡಿಕೆಗೆ ಸಿದ್ದತೆ ಮಾಡಿಕೊಳ್ಳಲಾಗಿದ್ದು,ಎಐ ಕ್ಯಾಮರಾ ವಾಹನದ ವೇಗ,ಶಿಸ್ತು ಉಲ್ಲಂಘನೆ, ಚಾಲಕರ ಸೀಟ್ ಬೆಲ್ಟ್ ಸೇರಿದಂತೆ ಟ್ರಾಫಿಕ್ ರೂಲ್ಸ್ ಮಾಡಿದ ವಾಹನ ನಂಬರ್ ಪ್ಲೇಟ್ ಸಮೇತ ಕ್ಯಾಪ್ಚರ್ ಮಾಡಿಲೊಳ್ಳುತ್ತದೆ. 200-250 ಮೀಟರ್ ದೂರದವರೆಗೆ ದೃಶ್ಯಾವಳಿ ಸೆರೆ ಹಿಡಿಯುವ ಸಾಮರ್ಥ್ಯ ಎಐ ಕ್ಯಾಮರಾಗಿದ್ದು, ಬೆಂಗಳೂರಿನ ವಿವಿಧ ಕಡೆ ಎಐ ಕ್ಯಾಮರಾ ಅಳವಡಿಕೆಗೆ ಪ್ಲಾನ್ ಮಾಡಿಕೊಳ್ಳಲಾಗಿದೆ.