ಶಿವಮೊಗ್ಗ: ಮಗಳನ್ನು ಹತ್ಯೆ ಮಾಡಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶರಾವತಿ ನಗರದ ವಸತಿಗೃಹದಲ್ಲಿ ನಡೆದಿದೆ.. ಪೂರ್ವಿಕಾ ಕೊಲೆಯಾದ ಬಾಲಕಿ. ಆರೋಪಿಯನ್ನು ಶ್ರುತಿ ಎಂದು ಗುರುತಿಸಲಾಗಿದೆ.
ಪತಿ ರಾಮಣ್ಣ ಅವರು, ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಬಂದಾಗ ಬಾಗಿಲು ತೆಗೆಯದ ಹಿನ್ನೆಲೆಯಲ್ಲಿ ಸ್ಥಳೀಯರ ಸಹಾಯದಿಂದ ಬಾಗಿಲು ಮುರಿದು ಒಳ ಹೋದಾಗ ಇದು ಬೆಳಗಿಗೆ ಬಂದಿದೆ.
ಶ್ರುತಿ ಮಾನಸಿಕ ಅಸ್ವಸ್ಥೆಯಾಗಿದ್ದು, ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎನ್ನಲಾಗಿದೆ. ಆದಿಚುಂಚನಗಿರಿ ಖಾಸಗಿ ಶಾಲೆಯಲ್ಲಿ ಆರನೇ ತರಗತಿ ವ್ಯಾಸಾಂಗ ಮಾಡ್ತಿದ್ದ ಪೂರ್ವಿಕಾ, ರಾತ್ರಿ 10.30ಕ್ಕೆ ತಂದೆಗೆ ಕರೆ ಮಾಡಿದ್ದಳು. ಮಾತ್ರೆ ತೆಗೆದುಕೊಂಡ ತಾಯಿ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದು ತಂದೆಗೆ ತಿಳಿಸಿದ್ದಳು. ಈ ವೇಳೆ ಮಗಳಿಗೆ ಧೈರ್ಯ ಹೇಳಿದ್ದ ರಾಮಣ್ಣ, ಬೆಳಗ್ಗೆ ಮನೆಗೆ ಬಂದು ನೋಡಿದಾಗ ಘಟನೆ ನಡೆದುಹೋಗಿದೆ.


