ನವದೆಹಲಿ; ಧಾರ್ಮಿಕ ಮತ್ತು ಜನಾಂಗೀಯ ವಿಷಯವಾಗಿ ಎರಡು ಗುಂಪುಗಳ ನಡುವೆ ಭೀಕರ ಹಿಂಸಾಚಾರ ನಡೆದಿದೆ. ಇತ್ತೀಚೆಗಷ್ಟೇ ಮಣಿಪುರದಲ್ಲೂಇಂಥದ್ದೇ ಪ್ರಕರಣ ನಡೆದಿತ್ತು. ಅದೇ ರೀತಿಯಾಗಿ ನೈಜೀರಿಯಾದಾದ್ಯಂತ ರೈತರು ಮತ್ತು ಕುರಿಗಾಹಿಗಳ ನಡುವೆ ಕಳೆದ ಮೇ ತಿಂಗಳಿನಲ್ಲಿ ಸಂಘರ್ಷ ನಡೆದು 100 ಹೆಚ್ಚು ಜನ ಮೃತಪಟ್ಟಿದ್ದರು.
ಇದೀಗ ಮತ್ತೆ ಭಾನುವಾರ ಎರಡು ಗುಂಪುಗಳ ನಡುವೆ ನಡೆದ ಸಂಘರ್ಷ ದಾಳಿಯಲ್ಲಿ16 ಜನರು ಮೃತಪಟ್ಟಿದ್ದಾರೆಂದು ಹಾಗೂ ಈವರೆಗೆ ಒಟ್ಟು 113 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹಾಗೂ ಮಾಧ್ಯಮಗಳು ವರದಿ ಮಾಡಿವೆ. ಈ ದಾಳಿಯನ್ನು ಖಂಡಿಸಿ , ಮುಗ್ಧ ನಾಗರಿಕರ ವಿರುದ್ಧ ನಡೆಯುತ್ತಿರುವ ದಾಳಿಯನ್ನು ನಿಲ್ಲಿಸಿ’ ಎಂದು ರಾಜ್ಯ ಗವರ್ನರ್ ವಕ್ತಾರ ಗ್ಯಾಂಗ್ ಬೆರೆ ಆದೇಶಿಸಿದ್ದಾರೆ. ಅಲ್ ಜಜೀರಾ ವರದಿ ಪ್ರಕಾರ, ಪ್ರಸ್ಥಭೂಮಿ ನೈಜೀರಿಯಾದಲ್ಲಿ ಕೃಷಿ ಭೂಮಿ ವಿಸ್ತರಣೆ ಮುಸ್ಲಿಂ ಕುರುಬರು ಮತ್ತು ಕ್ರಿಶ್ಚಿಯನ್ ರೈತರ ನಡುವೆ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.