ಟ್ರಂಪ್ ಟ್ಯಾಕ್ಸ್ ವಾರ್ಗೆ ಮೋದಿ ಟಕ್ಕರ್

ಟ್ರಂಪ್ಗೆ ಮೋದಿ ಭಯಂಕರ ಶಾಕ್ ಕೊಟ್ಟಿದ್ದಾರೆ. ಟ್ಯಾಕ್ಸ್ ವಾರ್ ಘೋಷಿಸಿದ್ದ ದೊಡ್ಡಣ್ಣನ ಪಕ್ಕೆಗೆ ಮೋದಿ ಗುದ್ದಿದ್ದಾರೆ. ಮೋದಿ ಕೊಟ್ಟ ಏಟಿಗೆ ಟ್ರಂಪ್ ಕಕ್ಕಾಬಿಕ್ಕಿಯಾಗಿದ್ದಾರೆ.
ಭಾರತದ ಪರವಾಗಿ ಮಾತನಾಡಲು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೆಚ್ಚಿನ ಮಾತುಕತೆಗೆ ಮುಂದಾಗುವುದರೊಂದಿಗೆ ಅಮೆರಿಕ-ಭಾರತ ನಿಯೋಗ ಮಟ್ಟದ ಸುಂಕ ಮಾತುಕತೆಗಳು ಕೊನೆಗೊಂಡಿರಬಹುದು, ಆದರೆ ಹಿನ್ನೆಲೆ ಕೆಲಸ ಮತ್ತು ಯೋಜನೆ ಈಗಾಗಲೇ ಕಾರ್ಯರೂಪದಲ್ಲಿದೆ.
ಏಪ್ರಿಲ್ 2ರಿಂದ ಭಾರತ ಸೇರಿದಂತೆ ವಿವಿಧ ದೇಶಗಳ ವಿರುದ್ಧ ಪ್ರತೀಕಾರಾತ್ಮಕ ಸುಂಕವನ್ನು ಹೇರಲು ಅಮೆರಿಕ ಸಿದ್ಧತೆ ನಡೆಸುತ್ತಿದೆ. ಭಾರತದ ವ್ಯಾಪಾರ ನೀತಿಗಳನ್ನು ನಿರಂತರವಾಗಿ ಟ್ರಂಪ್ ಟೀಕಿಸುತ್ತಾ ಬಂದಿದ್ದು, ಭಾರತದ ಆಮದು ಸುಂಕಗಳು ಅತ್ಯಂತ ನ್ಯಾಯಸಮ್ಮತವಲ್ಲದ್ದು ಹಾಗೂ ಪ್ರಬಲ ಎಂದಿದ್ದಾರೆ. ಜೊತೆಗೆ ಭಾರತವನ್ನು ‘ಸುಂಕದ ರಾಜ’ ಎಂದು ಕರೆದಿದ್ದರು.
ಭಾರತದ ಜೊತೆ ನನಗೆ ಒಳ್ಳೆಯ ಸಂಬಂಧ ಇದೆ. ಆದರೆ ಏಕೈಕ ಸಮಸ್ಯೆಯೆಂದರೆ, ಅದು ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶ. ಸುಸ್ಥಿರತೆಯನ್ನು ಕಾಪಾಡುವ ಸಲುವಾಗಿ ಸುಂಕವನ್ನು ಭಾರತ ಕಡಿಮೆ ಮಾಡುತ್ತದೆ ಎಂಬ ನಿರೀಕ್ಷೆ ನನ್ನದು. ಆದರೆ ಏಪ್ರಿಲ್ 2ರಂದು ನಮ್ಮ ಮೇಲೆ ಅವರು ವಿಧಿಸುವಷ್ಟೇ ಸುಂಕವನ್ನು ನಾವೂ ಹೇರಲಿದ್ದೇವೆ ಎಂದು ಈ ಮೊದಲು ಹೇಳಿಕೆ ನೀಡಿದ್ದರು.