Wednesday, April 30, 2025
32 C
Bengaluru
LIVE
ಮನೆ#Exclusive NewsTop NewsModi-Prajwal: ಪ್ರಜ್ವಲ್​ಗೆ ಶಿಕ್ಷೆ ಆಗ್ಲೇಬೇಕು - ಪ್ರಧಾನಿ ಮೋದಿ ಕಠಿಣ ಮಾತು

Modi-Prajwal: ಪ್ರಜ್ವಲ್​ಗೆ ಶಿಕ್ಷೆ ಆಗ್ಲೇಬೇಕು – ಪ್ರಧಾನಿ ಮೋದಿ ಕಠಿಣ ಮಾತು

ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (PMModi) ಮೌನ ಮುರಿದಿದ್ದಾರೆ. ಟೈಮ್ಸ್​ನೌ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣದ (PrajwalRevannaScandal)ಕುರಿತಾಗಿ ವಿಸ್ತೃತವಾಗಿ ಮಾತನಾಡಿದ್ದಾರೆ.

ಪ್ರಜ್ವಲ್​ ರೇವಣ್ಣಗೆ ಕಠಿಣ ಶಿಕ್ಷೆ ಆಗಲೇಬೇಕು

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ (PrajwalRevannaScandal) ದಂತಹ ಪ್ರಕರಣಗಳನ್ನು ಸಹಿಸುವ ಮಾತೇ ಇಲ್ಲ.. ಅವರಿಗೆ ಕಠಿಣ ಶಿಕ್ಷೆ ಆಗಲೇಬೇಕು. ಅವರು ಯಾವ ದೇಶದಲ್ಲೇ ಇದ್ದರೂ ಸರಿ, ಅವರನ್ನು ಕರೆತಂದು ಕಠಿಣ ಶಿಕ್ಷೆ (StrictAction) ಕೊಡಿಸಲೇಬೇಕು. ಈ ವಿಚಾರದಲ್ಲಿ ನಾವು ಶೂನ್ಯ ಸಹಿಷ್ಣು(Zero Tolerance)ಗಳು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ

ಪ್ರಕರಣ ಹೊರಬಂದ ಸಮಯ – ಮೋದಿ ಅನುಮಾನ

ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ವಿಡಿಯೋಗಳು ಹೊರ ಬಂದ ಸಮಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ (Karnataka Elections) ಒಂದು ದಿನ ಮೊದಲು ಈ ವಿಡಿಯೋಗಳು ಹೊರಬಂದವು. ಒಕ್ಕಲಿಗರ ಪ್ರಭಾವ ಇರುವ ಪ್ರದೇಶ(Vokkaliga Dominated Region)ಗಳಲ್ಲಿ ಚುನಾವಣೆ ಮುಗಿಯುವ ಹೊತ್ತಲ್ಲಿ ಅಶ್ಲೀಲ ವಿಡಿಯೋಗಳು ಹೊರಬಂದವು. ಪ್ರಜ್ವಲ್ ರೇವಣ್ಣ ದೇಶದಿಂದ ಹೊರಗೆ ಹೋದ ಮೇಲೆ ವಿಡಿಯೋಗಳು ರಿಲೀಸ್ ಆಗಿವೆ. ಈ ಬೆಳವಣಿಗೆ ಬಹಳ ಅನುಮಾನಾಸ್ಪದವಾಗಿದೆ.  ಇದನ್ನು ನೋಡಿದರೇ  ರಾಜಕೀಯ ಷಡ್ಯಂತ್ರ್ಯ ಎನಿಸದೇ ಇರದು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜ್ವಲ್ ಪಲಾಯನ – ಕರ್ನಾಟಕ ಸರ್ಕಾರವೇ ಹೊಣೆ

ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಇದು ಕಾನೂನು ಸುವ್ಯವಸ್ಥೆಗೆ(Law and Order) ಸಂಬಂಧಿಸಿದ ವಿಚಾರವಾದ ಕಾರಣ, ಕ್ರಮ ತೆಗೆದುಕೊಳ್ಳುವ ಜವಾಬ್ದಾರಿಯೂ ಕರ್ನಾಟಕ ಸರ್ಕಾರದ (KanratakaGovt)ಮೇಲೆಯೇ ಇದೆ. ಆದರೆ,  ವಿಷಯ ಗೊತ್ತಿದ್ದರೂ ಕರ್ನಾಟಕ ಸರ್ಕಾರ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಪ್ರಜ್ವಲ್ ರೇವಣ್ಣ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕಿತ್ತು. ಏರ್​ಪೋರ್ಟ್​ಗಳನ್ನು (Airport)ಅಲರ್ಟ್ ಮಾಡಬೇಕಿತ್ತು.

ಆದರೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಏನೂ ಮಾಡಲಿಲ್ಲ. ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಿಲ್ಲ. ಪ್ರಜ್ವಲ್ ರೇವಣ್ಣ ದೇಶದಿಂದ ಹೊರ ಹೋಗಲು ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಅಂದರೆ, ಇದು ಪೊಲಿಟಿಕಲ್ ಗೇಮ್.(Political Game)

ದೇವೇಗೌಡಜಿ-ಕಾಂಗ್ರೆಸ್ ಮೈತ್ರಿ ಅವಧಿಯಲ್ಲಿ ಸಹಸ್ರಾರು ವೀಡಿಯೋ

ಸಹಸ್ರಾರು ವೀಡಿಯೋಗಳನ್ನು ಒಂದೆರಡು ದಿನದಲ್ಲಿ ಮಾಡಲಿಕ್ಕೆ ಆಗಲ್ಲ. ಅಂದರೇ, ದೇವೇಗೌಡಜಿ ಮತ್ತು ಕಾಂಗ್ರೆಸ್ ಪಕ್ಷ ಮೈತ್ರಿ (Congress-JDS alliance)ಮಾಡಿಕೊಂಡಿದ್ದ ಅವಧಿಯಲ್ಲಿ ಪ್ರಜ್ವಲ್ ರೇವಣ್ಣ ಕೃತ್ಯ ಎಸಗಿದ್ದಾರೆ ಎಂಬುದು ಗೊತ್ತಾಗುತ್ತದೆ. ಈ ವಿಚಾರ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೂ ಗೊತ್ತಿತ್ತು. ಅವರೇ ವಿಡಿಯೋಗಳನ್ನು ಒಟ್ಟುಗೂಡಿಸಿಕೊಂಡಿದ್ದರು. ಹಾಗಿದ್ದೂ, ಇದು ನನಗೆ ಮುಖ್ಯವಲ್ಲ.. ಯಾರೇ ಅಪರಾಧ ಮಾಡಿದ್ದರೂ ಅಂಥವರನ್ನು ಬಿಡಬಾರದು. ನಮ್ಮ ದೇಶದಲ್ಲಿ ಇಂತಹ ಆಟಗಳನ್ನು ಕೊನೆಗಾಣಿಸಲೇಬೇಕು.

ರಾಜಕೀಯ ಏನೇ ಇರಲಿ ಅವರನ್ನು ಕ್ಷಮಿಸುವ ಮಾತೇ ಇಲ್ಲ

ನರೇಂದ್ರ ಮೋದಿಗೆ (NarendraModi)ಸಂಬಂಧಿಸಿದಂತೆ, ಬಿಜೆಪಿಗೆ ಸಂಬಂಧಿಸಿದಂತೆ, ದೇಶಕ್ಕೆ ಸಂಬಂಧಿಸಿದಂತೆ, ಸಂವಿಧಾನಕ್ಕೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿದೆ. ಅಂತಹ ವ್ಯಕ್ತಿಗಳನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ.. ಕಾನೂನಿನ ಎಲ್ಲಾ ಆಯ್ಕೆಗಳನ್ನು ಬಳಕೆ ಮಾಡಿಕೊಂಡು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.. ಅಂಥವರನ್ನು ವಾಪಸ್ ಕರೆತಂದು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಮಾತುಗಳಲ್ಲಿ ಒತ್ತಾಯ ಮಾಡಿದ್ದಾರೆ.

 

 

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments