ವಿಜಯಪುರ; ಹಿಜಾಬ್ ವಿಚಾರ ಕೋರ್ಟ್ ನಲ್ಲಿದೆ ಹಿಜಾಬ್ ಬ್ಯಾನ್ ಆಗುವ ಮುಂಚೆ ಸೌಹಾರ್ದಯುತವಾಗಿ ಪರಸ್ಪರ ವಿಶ್ವಾಸ, ಹೊಂದಾಣಿಕೆ ಮೂಲಕ ಇತ್ತು. ಅದನ್ನು ಈಗ ಕದಡಿಸಿದ್ದಾರೆ. ಶಾಲಾ ಕಾಲೇಜುಗಳಲ್ಲಿ ಜಾತಿ ಧರ್ಮ ಪಕ್ಷ ಒಯ್ಯಬಾರದು. ಮುಂಚಿತವಾಗಿ ಹೊಂದಾಣಿಕೆ ಮೇಲಿದ್ದನ್ನು ಕದಲಿಸಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ಮೇಲೆ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.
ರಾಜ್ಯದಲ್ಲಿ ಮತ್ತೇ ಹಿಜಾಬ್ ಸದ್ದು ವಿಚಾರಕ್ಕೆ ವಿಜಯಪುರ ನಗರದಲ್ಲಿ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಹೇಳಿಕೆ ನೀಡಿದರು. ಹಿಜಾಬ್ ನಿಷೇಧ ಹಿಂಪಡೆಯುವ ಸಿಎಂ ಹೇಳಿಕೆ ವಿಚಾರಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಹಿಜಾಬ್ ವಿಚಾರ ನ್ಯಾಯಾಲಯದಲ್ಲಿದೆ. ಅದನ್ನು ಕಾನೂನಾತ್ಮಕವಾಗಿ ವಿಚಾರ ಮಾಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ ಎಂದರು. ಸಿಎಂ ಸಿದ್ದರಾಮಯ್ಯ ಎರಡನೇ ಟಿಪ್ಪು ಸುಲ್ತಾನ್ ಎಂದು ಯತ್ನಾಳ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್ ಮಾತನಾಡಿ, ಮೂರನೇಯ ಟಿಪ್ಪು ಸುಲ್ತಾನ್ ಯತ್ನಾಳ್ ಎಂದು ಟಾಂಗ್ ಕೊಟ್ಟರು.

ಈ ಹಿಂದೆ ಯತ್ನಾಳ್ ಟಿಪ್ಪು ಸುಲ್ತಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಫೋಟೋಗಳಿವೆ. ಆ ಫೋಟೋವನ್ನು ನನಗೆ ಮಾಧ್ಯಮದವರೇ ಹಾಕಿದ್ದಾರೆ. ನಾವು ಯತ್ನಾಳರನ್ನು ಮೂರನೇ ಟಿಪ್ಪು ಸುಲ್ತಾನ್ ಎಂದು ಕರೆಯುತ್ತೇವೆ. ಎಲ್ಲವೂ ನಿಮ್ಮ ಬಳಿ ಇದ್ದರೂ ನಮ್ಮ ಬಾಯಿಂದ ಹೇಳಿಸುತ್ತಿರಿ ಎಂದು ಮಾಧ್ಯಮದವರಿಗೆ ಸಚಿವ ಎಂ. ಬಿ. ಪಾಟೀಲ್ ಪ್ರಶ್ನೆ ಮಾಡಿದರು.
ರೈತರು ಪದೇ ಪದೇ ಬರವನ್ನು ಬಯಸುತ್ತಾರೆ, ಸಾಲಮನ್ನಾ ನಿರೀಕ್ಷೆಯಲ್ಲಿರುತ್ತಾರೆ ಎಂಬ ಸಚಿವ ಶಿವಾನಂದ ಪಾಟೀಲರ ಬೇಜವಾಬ್ದಾರಿ ಹೇಳಿಕೆ ವಿಚಾರಕ್ಕೆ ಸಚಿವ ಎಂ.ಬಿ.ಪಾಟೀಲ್, ಅವರು ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ ಎಂದರು. ಸಚಿವ ಶಿವಾನಂದ ಪಾಟೀಲ್ ಯಾವ ಅರ್ಥ, ಸಂದರ್ಭದಲ್ಲಿ ಹೇಳಿದ್ದಾರೆ ಎಂಬುದನ್ನು ಬಹುಶಃ ಅವರನ್ನು ಕೇಳಿದರೆ ಸೂಕ್ತ. ಅವರು ಹೇಳಿದ್ದು ನನ್ನ ಗಮನಕ್ಕೆ ಇಲ್ಲ ಎಂದರು.

ಇನ್ನು ವೀರಶೈವ ಮಹಾಸಭಾ ಸಮಾವೇಶಕ್ಕೆ ಎಂ. ಬಿ. ಪಾಟೀಲ್ ಗೈರಾಗಿರುವ ಕುರಿತು ಉತ್ತರಿಸಿ, ಸಮಾವೇಶಕ್ಕೆ ಹಾಜರಾಗದೇ ಇರುವ ಕಾರಣ ನಾನು ನನ್ನ ಸಂದೇಶವನ್ನು ಕಳುಹಿಸಿದ್ದೇನೆ. ಡಿಸೆಂಬರ್ 23ರಂದು ಪ್ರಭಾಕರ್ ಕೋರೆಯವರ 50ನೇ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮೊದಲೇ ಹೇಳಿದ್ದರು. ಹೀಗಾಗಿ ನಾನು ನನ್ನ ಧರ್ಮ ಪತ್ನಿ ಹೋಗುವುದು ಅನಿವಾರ್ಯವಾಗಿತ್ತು. ನಿನ್ನೆ ವಿಜಯಪುರದಲ್ಲಿ ಮ್ಯಾರಥಾನ್ ಇತ್ತು ಹೀಗಾಗಿ ಪಾಲ್ಗೊಂಡಿಲ್ಲ. ದಾವಣಗೆರೆಯಲ್ಲಿ ನಡೆದಿದ್ದ ವೀರಶೈವ ಮಹಾಸಭಾ ಸಮಾವೇಶಕ್ಕೆ ಗೈರಾಗಿರುವದಕ್ಕೆ ಸಚಿವ ಎಂ ಬಿ ಪಾಟೀಲ್ ಸ್ಪಷ್ಟನೆ ನೀಡಿದರು.