ಮಿಲನಾ ನಾಗರಾಜ್ ಅವರು ಸೀಮಂತ ಶಾಸ್ತ್ರಕ್ಕೆ ಕುಟುಂಬದವರು ಹಾಗೂ ಕೆಲವೇ ಕೆಲವು ಆಪ್ತರು ಆಗಮಿಸಿ ಮಿಲನಾಗೆ ಶುಭಕೋರಿದ್ದಾರೆ. ಸೀಮಂತದ ಫೋಟೋ ಈಗ ಜನರ ಗಮನ ಸೆಳೆದಿದೆ. ಮಿಲನಾ ಅವರು ಸೆಪ್ಟೆಂಬರ್ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ.
ಮಿಲನಾ ನಾಗರಾಜ್ ಅವರು ಈಗ ತುಂಬ ಗರ್ಭಿಣಿ. ಅವರ ಬೇಬಿ ಬಂಪ್ ಗಮನ ಸೆಳೆಯುತ್ತಿದೆ. ಈಗ ಅವರ ಸೀಮಂತ ಶಾಸ್ತ್ರ ನಡೆದಿದೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮಿಲನಾ ನಾಗರಾಜ್ ಅವರು ಸೀಮಂತ ಶಾಸ್ತ್ರಕ್ಕೆ ಕುಟುಂಬದವರು ಹಾಗೂ ಕೆಲವೇ ಕೆಲವು ಆಪ್ತರು ಆಗಮಿಸಿದ್ದರು.
ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಇಬ್ಬರೂ ಸ್ಯಾಂಡಲ್ವುಡ್ನಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಕೆಮಿಸ್ಟ್ರಿ ಫ್ಯಾನ್ಸ್ಗೆ ಸಖತ್ ಇಷ್ಟವಾಗಿದ್ದು, ಇಬ್ಬರೂ ಒಟ್ಟಾಗಿ ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರು ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ನಟನಾಗಿ, ನಿರ್ಮಾಪಕನಾಗಿ ನಿರ್ದೇಶಕನಾಗಿ ಫೇಮಸ್ ಆಗಿದ್ದಾರೆ.