ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳಿಗಾಗಿ ಅಂತ ಸ್ಟಾರ್ಟ್ ಅಪ್ ಕಂಪನಿಯೊಂದು ಮೆಟ್ರೋ‌ ರೈಡ್ ಕಿಡ್ಸ್ ಕ್ಯಾಬ್  ಆರಂಭಿಸಲು ಸಿದ್ಧವಾಗಿದೆ. ಈಗಾಗಲೇ ಹೈದರಾಬಾದ್​ನಲ್ಲಿ ಚಾಲ್ತಿಯಲ್ಲಿರುವ ಕಿಡ್ಸ್ ಕ್ಯಾಬ್ ಬೆಂಗಳೂರಿಗೆ ಪರಿಚಯಿಸಲು ಮುಂದಾಗಿದೆ. ಆದರೆ ಪೋಷಕರಿಂದ ಈ ಕಿಡ್ಸ್ ಕ್ಯಾಬ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಕ್ಕಳ ಪ್ರಯಾಣಕ್ಕಂತಲೇ ಮೆಟ್ರೋ ರೈಡ್ ಕಿಡ್ಸ್ ಕ್ಯಾಬ್ ರಸ್ತೆಗೆ ಇಳಿಯಲು ಸಿದ್ದವಾಗಿದ್ದು, ಇದು ಮಕ್ಕಳಿಗೆ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಸದ್ಯ ಹೈದರಾಬಾದ್​ನಲ್ಲಿ ಕಿಡ್ಸ್ ಕ್ಯಾಬ್ ಚಾಲ್ತಿಯಲ್ಲಿದೆ. ಈಗ ಬೆಂಗಳೂರಿಗೂ ಆಗಮಿಸಲಿದ್ದು, ಇನ್ನೆರಡು ತಿಂಗಳಲ್ಲಿ ರಸ್ತೆಗಿಳಿಯಲಿದೆ. ಮಕ್ಕಳನ್ನು ಪಿಕ್ ಅಪ್ ಮತ್ತು ಡ್ರಾಪ್ ಮಾಡುವ ಕಿಡ್ಸ್ ಕ್ಯಾಬ್​ಗಳಲ್ಲಿ ಸಿಸಿಟಿವಿ ಮತ್ತು ಜಪಿಎಸ್​ ಇರುತ್ತದೆ. ಆ್ಯಪ್ ಮೂಲಕ ಕ್ಯಾಬ್ ಲೈವ್ ಲೊಕೇಶನ್ ​ಪರಿಶೀಲಿಸಬಹುದು. 5 ರಿಂದ 16 ವರ್ಷದ ಮಕ್ಕಳಿಗಾಗಿ ಈ ಕ್ಯಾಬ್ ಮೀಸಲಾಗಿದ್ದು, ಶಾಲೆ ಮತ್ತು ಕಾಲೇಜು ಇನ್ನಿತರ ಚಟುವಟಿಕೆಗಳಿಗೆ ತೆರಳುವ ಮಕ್ಕಳಿಗೆ ಅನುಕೂಲವಾಗಲಿದೆ.

ಇನ್ನೂ ಈಗಾಗಲೇ ಸರ್ಕಾರ ಕೂಡ ಶಾಲಾ ಬಸ್​ಗಳಿಗೆ ಜಿಪಿಎಸ್, ಸಿಸಿಟಿವಿ ಅಳವಡಿಕೆ ಜೊತೆಗೆ ಚಾಲಕ ಕುಡಿಯಬಾರದು ಎನ್ನುವ ಆದೇಶ ಇದೆ. ಆದರೂ ಕೂಡ ಚಾಲಕರು ಕುಡಿದು ಚಾಲನೆ ಮಾಡುವ ಘಟನೆಗಳು ಕಂಡು ಬರುತ್ತಿವೆ. ಹೀಗಿಗಾಗಿ ಖಾಸಗಿ ಕಂಪನಿಯೊಂದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಹೊಸದಾಗಿ ಮೆಟ್ರೊ ಕಿಡ್ಸ್ ಕ್ಯಾಬ್​​ ಬೆಂಗಳೂರಿಗೆ ಪರಿಚಯಿಸುತ್ತಿದೆ.

ಆದರೆ, ಈ ಕ್ಯಾಬ್​ ಗಂಡು ಮಕ್ಕಳಿಗೆ ಒಕೆ ಆದರೆ ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಇದು ಬೇಡ ಎಂದು ಮಕ್ಕಳ ಪೋಷಕರು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ಮಕ್ಕಳ ಸರಕ್ಷತೆ ವಿಚಾರವಾಗಿ ಮೆಟ್ರೊ ಕಿಡ್ಸ್ ಕ್ಯಾಬ್ ಬೆಂಗಳೂರಿಗೆ ದಾಪುಗಾಲು ಇಡಲು ಮುಂದಾಗಿದೆ. ಆದರೆ 10 ರಿಂದ 16 ವರ್ಷದ ಹೆಣ್ಣು ಮಕ್ಕಳಿಗೆ ಮನ ವಿಚಲಿತ ಆಗುವ ಸಂಭವ ಹೆಚ್ಚಾಗಿದ್ದು, ಈ ಅಂಶಗಳನ್ನ ಪರಿಗಣನೆಗೆ ತಗೆದುಕೊಂಡು ಸರ್ಕಾರ ಕ್ಯಾಬ್​​ಗೆ ಪರ್ಮಿಷನ್ ಕೊಡಬೇಕು ಅನ್ನೋದು ಜನರ ಆಶಯ.

Leave a Reply

Your email address will not be published. Required fields are marked *

Verified by MonsterInsights