ಬೆಂಗಳೂರು ಮೆಟ್ರೋವನ್ನು ತಮಿಳುನಾಡಿನ ಕೈಗಾರಿಕಾ ಪಟ್ಟಣವಾದ ಹೊಸೂರ್‌ಗೆ ಸಂಪರ್ಕಿಸುವ ಪ್ರಸ್ತಾಪವು ಕರ್ನಾಟಕದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಈ ಮೆಟ್ರೋ ಯೋಜನೆ ಶುರುವಾದರೆ ತಮಿಳುನಾಡಿನ ಜನರು ಹೆಚ್ಚು ವಲಸೆಗೆ ಬರುವ ಸಾಧ್ಯತೆ ಇದೆ ಎಂದು ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಸೆ.12: ನಗರದ ಜನರ ಜೀವನಾಡಿ ಸಾರಿಗೆಯಾಗಿರುವ ನಮ್ಮ ಮೆಟ್ರೋ (Namma Metro) ದಿನದಿಂದ ದಿನಕ್ಕೇ ವಿಸ್ತರಣೆ ಆಗುತ್ತಲೇ ಇದೆ. ಇದೀಗ ಬೆಂಗಳೂರಿನಿಂದ ಹೊಸೂರುವೆರೆಗೆ ನಮ್ಮ ಮೆಟ್ರೋ ವಿಸ್ತರಣೆ ಚರ್ಚೆ ಜೋರಾಗಿದ್ದು ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿವೆ. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಕರ್ನಾಟಕದ ಬೊಮ್ಮಸಂದ್ರದಿಂದ ತಮಿಳುನಾಡಿನ ಹೊಸೂರಿನ ವರೆಗೆ ಮೆಟ್ರೋ ಸಂಪರ್ಕ ಬೆಳೆಸುವ ಯೋಜನೆಯ ಕಾರ್ಯಸಾಧ್ಯತೆಯ ವರದಿಯನ್ನು ರಾಜ್ಯದ (Karnataka Government)ಮುಂದಿಟ್ಟಿದೆ. ಸದ್ಯ ಈ ಯೋಜನೆಗೆ ಹಲವು ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮೆಟ್ರೋವನ್ನು ತಮಿಳುನಾಡಿನ ಕೈಗಾರಿಕಾ ಪಟ್ಟಣವಾದ ಹೊಸೂರ್‌ಗೆ ಸಂಪರ್ಕಿಸುವ ಪ್ರಸ್ತಾಪವು ಕರ್ನಾಟಕದಲ್ಲಿ ವಿವಾದವನ್ನು ಹುಟ್ಟುಹಾಕಿದೆ. ಬೆಂಗಳೂರಿನಿಂದ ಹೊಸೂರಿಗೆ ಮೆಟ್ರೋ ಸಂಪರ್ಕವಾದರೆ ನೆರೆಯ ರಾಜ್ಯದಿಂದ ಬೆಂಗಳೂರಿಗೆ ಹೆಚ್ಚು ಸಂಖ್ಯೆಯಲ್ಲಿ ಜನರು ವಲಸೆ ಬರುವ ಸಾಧ್ಯತೆ ಇದೆ ಎಂದು ಕನ್ನಡ ಪರ ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಕರ್ನಾಟಕದ ಬೊಮ್ಮಸಂದ್ರವನ್ನು ತಮಿಳುನಾಡಿನ ಹೊಸೂರಿಗೆ ಸಂಪರ್ಕಿಸುವ ಕಾರ್ಯಸಾಧ್ಯತೆಯ ವರದಿಯನ್ನು ಮುಂದಿಟ್ಟಿದೆ. ಇದು ಜಾರಿಯಾದರೆ ಇದು ದಕ್ಷಿಣ ಭಾರತದ ಮೊದಲ ಅಂತರರಾಜ್ಯ ಮೆಟ್ರೋ ಆಗಲಿದೆ.
ಈ ಯೋಜನೆ ತಮಿಳುನಾಡಿನಲ್ಲಿ ಸುಮಾರು 11 ಕಿಮೀ ಮತ್ತು ಕರ್ನಾಟಕದಲ್ಲಿ 12 ಕಿಮೀ ಸೇರಿದಂತೆ 23 ಕಿಲೋಮೀಟರ್ ಉದ್ದವನ್ನು ಒಳಗೊಂಡಿದೆ. ಈ ಮಾರ್ಗದಲ್ಲಿ 12 ಮೆಟ್ರೋ ನಿಲ್ದಾಣಗಳು ಮತ್ತು ಡಿಪೋವನ್ನು ನಿರ್ಮಿಸಲು ಯೋಚಿಸಲಾಗಿದೆ.


