#Exclusive News

Metro Farmer; ನಮ್ಮ ಮೆಟ್ರೋದಲ್ಲಿ ರೈತರಿಗಿಲ್ವಾ ಎಂಟ್ರಿ?

ನಮ್ಮ ಮೆಟ್ರೋದಲ್ಲಿ ಬರೀ ಸೂಟು ಬೂಟು ಹಾಕಿಕೊಂಡವರು ಮಾತ್ರ ಪ್ರಯಾಣ ಮಾಡಬೇಕಾ? ಅವರಿಗೆ ಅವರಿಗೆ ಮಾತ್ರ ಅನುಮತಿ ಇದೆಯಾ? ರೈತರು, ಕೂಲಿ ಕಾರ್ಮಿಕರು ಮೆಟ್ರೋದಲ್ಲಿ ಸಂಚರಿಸಲು ಅನುಮತಿ ಇಲ್ವಾ?

ಹೀಗಂತ ಯಾವುದಾದರೂ ಆದೇಶ ಆಗಿದೆಯಾ? ಗೊತ್ತಿಲ್ಲ. ಆದರೆ, ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಮೂರು ದಿನಗಳ ಹಿಂದೆ ನಡೆದ ಅಮಾನವೀಯ ಘಟನೆಯೊಂದು ತಲೆ ತಗ್ಗಿಸುವಂತಿದೆ.

ತಲೆ ಮೇಲೊಂದು ಚೀಲ ಇಟ್ಟುಕೊಂಡು ಮಾಸಲು ಅಂಗಿ ಧರಿಸಿದ್ದ ಉತ್ತರಭಾರತದ ರೈತಾಪಿ ಕುಟುಂಬದ ಹಿರಿಯರೊಬ್ಬರು ನಮ್ಮ ಮೆಟ್ರೋ ಹತ್ತಲು ರಾಜಾಜಿನಗರ ನಿಲ್ದಾಣಕ್ಕೆ ಬಂದಿದ್ರು.

ಆದರೆ, ಅವರ ವೇಷಭೂಷಣ ನೋಡಿ ಅಸಹ್ಯಿಸಿಕೊಂಡ ಮೆಟ್ರೋ ಸಿಬ್ಬಂದಿ, ಅವರನ್ನು ಒಳಗೆ ಬಿಡದೇ ಸತಾಯಿಸಿದ್ದಾರೆ. ಸಹ ಪ್ರಯಾಣಿಕರಿಗೆ ತೊಂದರೆ ಆಗುತ್ತೆ ಎಂಬ ಕಾರಣ ನೀಡಿ ಅವರನ್ನು ಮೆಟ್ರೋ ಒಳಗೆ ಬಿಡಲು ನಿರಾಕರಿಸಿದ್ದಾರೆ.

ಇದನ್ನು ಗಮನಿಸಿದ ಸಹ ಪ್ರಯಾಣಿಕ, ಕನ್ನಡಿಗ ಕಾರ್ತಿಕ್ ಸಿ ಐರಾಣಿ ಅವರು ಮೆಟ್ರೋ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದಾರೆ. ಮೆಟ್ರೋ ಸಿಬ್ಬಂದಿಯ ಅಮಾನವೀಯ ವರ್ತನೆಯನ್ನು ಸ್ಥಳದಲ್ಲೇ ಖಂಡಿಸಿದ ಕಾರ್ತಿಕ್ ಸಿ ಐರಾಣಿ, ಆ ಬಡ ರೈತನನ್ನು ಮೆಟ್ರೋ ಒಳಗೆ ಕರೆದೊಯ್ದಿದ್ದಾರೆ.

ಇದಕ್ಕೆ ಸಂಬಂಧಿಸಿದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಮೆಟ್ರೋ ಸಿಬ್ಬಂದಿಯ ಅಮಾನವೀಯ ವರ್ತನೆಗೆ ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಘಟನೆ ನಡೆದು ಮೂರು ದಿನ ಕಳೆದರೂ ಬಿಎಂಆರ್​ಸಿಎಲ್ ಸಿಬ್ಬಂದಿ ಮಾತ್ರ ಈವರೆಗೂ ಕ್ಷಮೆ ಕೇಳುವ, ವಿಷಾದ ವ್ಯಕ್ತಪಡಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಅಮಾನವೀಯವಾಗಿ ವರ್ತಿಸಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ.

 

Comments (0)

Your email address will not be published. Required fields are marked *

Back to top button