ತಾಳಿ ಕಟ್ಟಿದ ಅರ್ಧ ಗಂಟೆಯಲ್ಲೇ ವರ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ದುರಂತ ನಡೆದಿದೆ. ಪ್ರವೀಣ ಕುರಣಿ ಹೃದಯಾಘಾತದಿಂದ ಮೃತಪಟ್ಟ ವರ.
ಮದುವೆಯ ಸಂಭ್ರಮದಿಂದ ಕಳೆ ಕಟ್ಟಿದ ವರ ಮತ್ತು ವಧುವಿನ ಕುಟುಂಬಗಳಲ್ಲಿ ಸೂತಕ ಆವರಿಸಿದೆ.
ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ ಪ್ರವೀಣ ಕುರಣಿ ಮೃತಪಟ್ಟ ವರ. ಇವರು ಮೂಲತಃ ಕುಂಬಾರಹಳ್ಳಿ ಗ್ರಾಮದವರು.
ಇಂದು ಜಮಖಂಡಿ ನಗರದಲ್ಲಿ ಇರುವ ಮನೆಯಲ್ಲಿ ದೈವದ ಅಕ್ಕಿಕಾಳು ಕಾರ್ಯ ನಡೆದಿತ್ತು. ಬಳಿಕ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಆರತಕ್ಷತೆ ಇಟ್ಟುಕೊಂಡಿದ್ದರು.
ಕಲ್ಯಾಣಮಂಟಪಕ್ಕೆ ಆಗಮಿಸಿದ ನವ ದಂಪತಿಗೆ ಬಂಧು-ಮಿತ್ರರು ಆರತಕ್ಷತೆ ಹಾಕಿ ಆಶೀರ್ವದಿಸುವ ಘಳಿಗೆಯಲ್ಲೇ ಯಾರೂ ಊಹಿಸದ ದುರ್ಘಟನೆ ನಡೆದಿದೆ.


