Tuesday, January 27, 2026
26.9 C
Bengaluru
Google search engine
LIVE
ಮನೆ#Exclusive NewsTop Newsಅಧಿಕಾರ ಹಸ್ತಾಂತರಿಸಿ ಐಷಾರಾಮಿ ಕಾರು ಬಿಟ್ಟು ಸೈಕಲ್​​ನಲ್ಲಿ ಹೋದ ಮಾಜಿ ಪ್ರಧಾನಿ

ಅಧಿಕಾರ ಹಸ್ತಾಂತರಿಸಿ ಐಷಾರಾಮಿ ಕಾರು ಬಿಟ್ಟು ಸೈಕಲ್​​ನಲ್ಲಿ ಹೋದ ಮಾಜಿ ಪ್ರಧಾನಿ

ನೆದರ್ಲ್ಯಾಂಡ್​​​ನ ಮಾಜಿ ಪ್ರಧಾನಿ ಸರಳತೆಗೆ ಹೆಸರಾಗಿದ್ದಾರೆ. ಮಾಜಿ ಪ್ರಧಾನಿ ಮಾರ್ಕ್ ರುಟ್ಟೆ ಅವರು ತಮ್ಮ 14 ವರ್ಷಗಳ ಅಧಿಕಾರವನ್ನು ಬಿಟ್ಟುಕೊಡುವ ಸಂದರ್ಭದಲ್ಲಿ ಸರಳತೆಯನ್ನು ಮೇರೆದಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಜುಲೈ 2ರಂದು ಮಾಜಿ ಪ್ರಧಾನಿ ಮಾರ್ಕ್ ರುಟ್ಟೆ ಅವರು ಡಿಕ್ ಸ್ಕೂಫ್‌ಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ. ಈ ಸಮಯದಲ್ಲಿ ಮಾರ್ಕ್ ರುಟ್ಟೆ ಸಮಾರಂಭ ಮುಗಿಸಿ ತಮ್ಮ ಕಚೇರಿಯನ್ನು ತೊರೆಯುವಾಗ ತಮ್ಮ ಕಾರನ್ನು ಬಿಟ್ಟು ಸೈಕಲ್​​​ನಲ್ಲಿ ಹೋಗಿದ್ದಾರೆ. ಇದೀಗ ಅವರ ಸರಳತೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ನೂತನ ಪ್ರಧಾನಿ ಡಿಕ್ ಸ್ಕೂಫ್‌ ಅವರಿಗೆ ಅಧಿಕಾರ ಹಸ್ತಂತಾರ ಸಮಾರಂಭದ ನಂತರ ಮಾರ್ಕ್ ರುಟ್ಟೆ ಅವರು ಪ್ರಧಾನಿ ಕಚೇರಿಯಿಂದ ಸೈಕಲ್​​​ನಲ್ಲಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ರುಟ್ಟೆ ಅವರು ಪ್ರಧಾನಿ ಕಚೇರಿಯಿಂದ ಹೋಗುವಾಗ ಅಲ್ಲಿದ್ದ ಅನೇಕ ಅಧಿಕಾರಿಗಳು ಹಾಗೂ ಜನ ಚಪ್ಪಾಳೆ ಮೂಲಕ ಅವರಿಗೆ ಬೀಳ್ಕೊಡುಗೆ ನೀಡಿದರು.

ಮಾರ್ಕ್ ರುಟ್ಟೆ ಅವರು ಸೈಕಲ್​​ನಲ್ಲಿ ಹೋಗುವುದು ಇದೇ ಮೊದಲಲ್ಲ. ಹಲವು ಬಾರಿ ಸರ್ಕಾರಿ ಕಾರ್ಯಕ್ರಮಗಳಿಗೆ ಹಾಗೂ ಸಾರ್ವಜನಿಕ ಸಭೆಗಳಿಗೆ ಸೈಕಲ್​​​ನಲ್ಲೇ ಹೋದ ಉದಾಹರಣೆ ಇದೆ. 14 ವರ್ಷಗಳ ಕಾಲ ಮಾರ್ಕ್ ರುಟ್ಟೆ ನೆದರ್ಲ್ಯಾಂಡ್​​​ನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ಅನುಭವ ಇದೆ. ಇನ್ನು ಮುಂದೆ ಅವರು NATOದ ಹೊಸ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜುಲೈ 2ರಂದು ಡಚ್ ಕಿಂಗ್ ವಿಲ್ಲೆಮ್-ಅಲೆಕ್ಸಾಂಡರ್ ಅವರು ದೇಶದ ಹೊಸ ಸರ್ಕಾರಕ್ಕೆ ಒಪ್ಪಿಗೆ ನೀಡಿ, ಪ್ರಮಾಣ ವಚನ ಬೋಧಿಸಿದರು.

ಪ್ರಧಾನಿ ಡಿಕ್ ಸ್ಕೂಫ್‌ ಡಚ್ ಗುಪ್ತಚರ ಸಂಸ್ಥೆ ಮತ್ತು ಭಯೋತ್ಪಾದನಾ ನಿಗ್ರಹ ಕಚೇರಿಯ ಮಾಜಿ ಮುಖ್ಯಸ್ಥರಾಗಿದ್ದರು. ಜುಲೈ 2ಕ್ಕೆ ಹ್ಯೂಸ್ ಟೆನ್ ಬಾಷ್ ಅರಮನೆಯಲ್ಲಿ ಅಧಿಕೃತವಾಗಿ ಪ್ರಧಾನಿ ಮಂತ್ರಿ ಸ್ಥಾನಕ್ಕೆ ಸಹಿ ಹಾಕಿದರು. ಇವರು ಜತೆಗೆ 15 ಜನ ಮಂತ್ರಿಗಳಿರುವ ಹೊಸ ಸರ್ಕಾರ ರಚನೆ ಅವಕಾಶ ನೀಡಲಾಗಿದೆ.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments