ಮನಿಶ್ ಬಳಿ ಸಾಮಾನ್ಯ ಲೆಹಂಗಾ ಖರೀದಿ ಮಾಡಬೇಕು ಎಂದರೆ ಒಂದರಿಂದ ಮೂರು ಲಕ್ಷ ರೂಪಾಯಿ ಪಾವತಿಸಲು ನೀವು ಸಿದ್ಧರಿರಬೇಕು. ಇದರ ಬೆಲೆ 15 ಲಕ್ಷ ರೂಪಾಯಿವರೆಗೂ ಹೋಗುತ್ತದೆ. ವಿಶೇಷ ಎಂದರೆ, ಸೆಲೆಬ್ರಿಟಿಗಳು ಹಾಗೂ ಹಲವು ಉದ್ಯಮಿಗಳ ಮದುವೆಗ ಇವರೇ ಬಟ್ಟೆ ಡಿಸೈನ್ ಮಾಡಿ ನೀಡುತ್ತಾ ಅನ್ನೋದು ವಿಶೇಷ.
ಬಾಲಿವುಡ್ನಲ್ಲಿ ಹಲವು ಡಿಸೈನರ್ಗಳು ಇದ್ದಾರೆ. ಆ ಪೈಕಿ ಅನೇಕರಿಗೆ ಫೇವರಿಟ್ ಎಂದರೆ ಅದು ಮನಿಶ್ ಮಲ್ಹೋತ್ರಾ ಅವರು. ಬಾಲಿವುಡ್ನಲ್ಲಿ ಹಲವು ಸಿನಿಮಾಗಳಿಗೆ ಇವರು ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಇವರಿಗೆ ಇಂದು (ಡಿಸೆಂಬರ್ 5) ಜನ್ಮದಿನ. ಬಾಲಿವುಡ್ನ ದುಬಾರಿ ಕಾಸ್ಟ್ಯೂಮ್ ಡಿಸೈನರ್ಗಳಲ್ಲಿ ಇವರು ಕೂಡ ಒಬ್ಬರು. ಇವರು ಚಾರ್ಜ್ ಮಾಡೋದು ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಮನಿಶ್ ಮಲ್ಹೋತ್ರಾ ಅವರು 1966ರ ಡಿಸೆಂಬರ್ 5ರಂದು ಜನಿಸಿದರು. ಅವರದ್ದು ಪಂಜಾಬಿ ಕುಟುಂಬ. ಅವರಿಗೆ ಕಾಲೇಜು ದಿನಗಳಲ್ಲಿ ಫ್ಯಾಷನ್ ಡಿಸೈನಿಂಗ್ ಬಗ್ಗೆ ಆಸಕ್ತಿ ಇತ್ತು. 1987ರಲ್ಲಿ ಇವರು ಇಬ್ಬರು ಟೇಲರ್ಗಳನ್ನು ಪಡೆದು ಮನೆಯಿಂದಲೇ ಫ್ಯಾಷನ್ ಡಿಸೈನರ್ನ ಹಯರ್ ಮಾಡಿದರು. 1989ರಲ್ಲಿ ಅವರು ನಟಿ ದಿವ್ಯಾ ಭಾರ್ತಿ ಅವರು ನಟಿಸಿದ ಸಿನಿಮಾಗೋಸ್ಕರ ಬಟ್ಟೆ ಡಿಸೈನ್ ಮಾಡಿದರು. ಆದರೆ, ಈ ಸಿನಿಮಾ ರಿಲೀಸ್ ಆಗಲೇ ಇಲ್ಲ.
ನಂತರ ಇವರು 1990ರಲ್ಲಿ ಮನಿಶ್ ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿಂದ ಅವರು ಸಿನಿಮಾ ಕಾಸ್ಟ್ಯೂಮ್ ಡಿಸೈನರ್ ಎನ್ನುವ ಪಟ್ಟ ಪಡೆದರು. 1990ರಲ್ಲಿ ರಿಲೀಸ್ ಆದ ‘ಸ್ವರ್ಗ್’ ಮನಿಶ್ ಕಾಸ್ಟ್ಯೂಮ್ ಡಿಸೈನ್ ಮಾಡಿದ ಮೊದಲ ಸಿನಿಮಾ. ರಾಜೇಶ್ ಖನ್ನಾ, ಗೋವಿಂದ, ಜೂಹಿ ಛಾವ್ಲಾ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದರು. ನಂತರ ಅವರು ಹಲವು ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡಿದರು. ಮನಿಶ್ ಐಫಾ ಸೇರಿ ಹಲವು ಅವಾರ್ಡ್ಗಳನ್ನು ಪಡೆದಿದ್ದಾರೆ. ಅವರು ತಮ್ಮದೇ ಸ್ವಂತ ಕಂಪನಿ ಹೊಂದಿದ್ದಾರೆ.
ಮನಿಶ್ ಬಳಿ ಸಾಮಾನ್ಯ ಲೆಹಂಗಾ ಖರೀದಿ ಮಾಡಬೇಕು ಎಂದರೆ ಒಂದರಿಂದ ಮೂರು ಲಕ್ಷ ರೂಪಾಯಿ ಪಾವತಿಸಲು ನೀವು ಸಿದ್ಧರಿರಬೇಕು. ಇದರ ಬೆಲೆ 15 ಲಕ್ಷ ರೂಪಾಯಿವರೆಗೂ ಹೋಗುತ್ತದೆ. ವಿಶೇಷ ಎಂದರೆ, ಸೆಲೆಬ್ರಿಟಿಗಳು ಹಾಗೂ ಹಲವು ಉದ್ಯಮಿಗಳ ಮದುವೆಗ ಇವರೇ ಬಟ್ಟೆ ಡಿಸೈನ್ ಮಾಡಿ ನೀಡುತ್ತಾ ಅನ್ನೋದು ವಿಶೇಷ. ಅವರು ಪ್ರತಿ ಸಿನಿಮಾಗೆ ಕಾಸ್ಟ್ಯೂಮ್ ಡಿಸೈನ್ ಮಾಡಲು ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಸೆಲೆಬ್ರಿಟಿಗಳು ವಿಶೇಷ ಈವೆಂಟ್ಗೆ ಮನಿಶ್ ಅವರು ತಯಾರಿಸಿದ ಬಟ್ಟೆಗೆ ಆದ್ಯತೆ ನೀಡುತ್ತಾರೆ. ಇದು ಅವರಿಗೆ ಪ್ರತಿಷ್ಠಯ ವಿಚಾರವೂ ಆಗಿದೆ.