Friday, August 22, 2025
20.8 C
Bengaluru
Google search engine
LIVE
ಮನೆಜಿಲ್ಲೆವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ಹುಬ್ಬಳ್ಳಿ : ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಉತ್ತರ ಕರ್ನಾಟಕ ಪ್ರಮುಖ ಮಠಗಳಲ್ಲಿ ಗುರುತಿಸಿಕೊಂಡಿರುವ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢರ ಮಠಕ್ಕೆ ಸಂಕ್ರಮಣದ ಹಿನ್ನೆಲೆಯಲ್ಲಿ ಭಕ್ತರ ದಂಡು ಹರಿದು ಬರುತ್ತಿದೆ. ಸರದಿ ಸಾಲಿನಲ್ಲಿ ನಿಂತು ಭಕ್ತರು ಶ್ರೀ ಸಿದ್ಧಾರೂಢರ ದರ್ಶನ ಪಡೆಯುವ ದೃಶ್ಯ ಸಾಮನ್ಯವಾಗಿದೆ.

ಭಕ್ತರಿಂದ ಸಿದ್ದಾರೂಢ ಮಠ ತುಂಬಿ ತುಳುಕುತ್ತಿದೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಭಕ್ತರನ್ನು ಸಿದ್ದಾರೂಢ ಮಠ ಹೊಂದಿದ್ದು, ಚಕ್ಕಡಿ, ಟ್ಯಾಕ್ಟರ್ ಸೇರಿದಂತೆ ವಿವುಧ ವಾಹಮಗಳ ಮೂಲಕ ಮಠಕ್ಕೆ ಆಗಮಿಸಿ ಭಕ್ತರು ಶ್ರೀ ಸಿದ್ಧಾರೂಢ ಹಾಗೂ ಶ್ರೀ ಗುರುನಾಥರೂಢರ ದರ್ಶನ ಪಡೆದುಕೊಂಡು ತಮ್ಮ ಇಷ್ಟಾರ್ಥ ಸಿದ್ಧಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಮಕರ ಸಂಕ್ರಮಣ ಹಿನ್ನೆಲೆ ಶ್ರೀ ಸಿದ್ಧಾರೂಢ ಟ್ರಸ್ಟ ಕಮಿಟಿ ವತಿಯಿಂದ ಮುಂಜಾನೆ ಆಡೂರಢರ ಗದ್ದುಗೆಗಳಿಗೆ ವಿಶೇಷ ಪೂಜೆ ನಡೆಸಲಾಯಿತು. ಬಳಿಕ ಭಕ್ತರಿಗೆ ಅವಕಾಶ ನೀಡಲಾಗಿದ್ದು, ಅರದಿ ಸಾಲಿನಲ್ಲಿ ಕುಟುಂಬ ಸಮೇತವಾಗಿ ಬಂದರೋ ಭಕ್ತರು ದರ್ಶನ ಪಡೆಯುತ್ತಿದುಕೊಳ್ಳುತ್ತಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments