Wednesday, April 30, 2025
29.2 C
Bengaluru
LIVE
ಮನೆವೈರಲ್ ನ್ಯೂಸ್ಬೀದರ್ ಬ್ಯೂಟಿಗೆ ಸ್ಕೂಟಿ ಆಸೆ ಗಂಡನಿಗೇ ಇಟ್ಟಳು ಮಹೂರ್ತ!

ಬೀದರ್ ಬ್ಯೂಟಿಗೆ ಸ್ಕೂಟಿ ಆಸೆ ಗಂಡನಿಗೇ ಇಟ್ಟಳು ಮಹೂರ್ತ!


ಬೀದರ್ : ಲವ್ ಮಾಡಿ ಮದುವೆ ಆಗಿದ್ದ ಜೋಡಿಗೆ ಕಂಟಕವಾದ ಕಾಮುಕನ ಚಿನ್ನ ಮತ್ತು ಸ್ಕೂಟಿ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನ ಜೊತೆ ಸೇರಿಕೊಂಡು ತನ್ನ ಗಂಡನ ಕೊಲೆ ಮಾಡಿದ ಖತರ್ನಾಕ ಲೇಡಿ ಆ್ಯಂಡ್ ಗ್ಯಾಂಗ್ ಅಂದರ್ ಆಗಿದ್ದು, ಪತ್ನಿ ಚೈತ್ರಾ ಆಕೆಯ ಪ್ರಿಯಕರ ರವಿ ಪಾಟೀಲ್ ಸೇರಿ 5 ಜನ ಕಂಬಿ ಎಣಿಸುತ್ತಿದ್ದಾರೆ. ಈ ಕುರಿತ ಕಂಪ್ಲೀಟ್ ಕ್ರೈಂ ಕಹಾನಿ ಇಲ್ಲಿದೆ ನೋಡಿ ಆತ ಎಂಬಿಎ ಪದವೀಧರ, ಕೈತುಂಬ ಸಂಬಳ ಬಿಟ್ಟು ಹುಟ್ಟೂರಲ್ಲಿ‌ ಕೃಷಿ ಕಾರ್ಯ ಮಾಡಿದ್ರಾಯ್ತು ಅಂತಾ ಕೃಷಿ ಕಾರ್ಯ ಆರಂಭಿಸಿದ್ದ. ಆತನ ಹೆಸ್ರು ಅಮೀತ್. ಆದ್ರೆ ಕೃಷಿ ಕಾರ್ಯ ಮಾಡುವಾಗಲೇ ಪರಿಚಿತವಾಗದ್ದ ಸ್ನೇಹಿತ ರವಿ ಪಾಟೀಲ್, ಅಮಿತ್ ಪತ್ನಿ ಚೈತ್ರಾಳೊಂದಿಗೆ ಸಲುಗೆ ಬೆಳೆಸಿ ಅಕ್ರಮ ಸಂಬಂದ ಬೆಳೆಸಿದ್ದ. ಅಕ್ರಮ ಸಂಬಂಧದ ಬಳಿಕ ಚೈತ್ರಾಳಿಗೆ ದುಬಾರಿ ಆಭರಣ, ಸ್ಕೂಟಿ ಕೊಡಿಸಿದ್ಧ ಎನ್ನಲಾಗಿದೆ.

ಏಕಾಏಕಿ ದುಬಾರಿ ಆಭರಣಗಳು ಎಲ್ಲಿಂದ ಬರುತ್ತಿವೆ ಎಂಬ ಸಣ್ಣ ಸಂಶಯ ಅಮಿತ್‌ಗೆ ಮನದಲ್ಲಿ ಮೂಡಿದೆ. ಬಳಿಕ ಪತ್ನಿ ಚೈತ್ರಾಗೆ ಪ್ರಶ್ನಿಸಿದಾಗ ಗಂಡನಿಗೆ ಎಲ್ಲಾ ವಿಷಯ ತಿಳಿಯಿತು ಎಂದು, ಇದರಿಂದ ಮರ್ಯಾದೆ ಹಾಳಾಗುತ್ತೆ ಅಂತಾ ಗಂಡನನ್ನ ಮುಗಿಸಲು ಸಂಚು ರೂಪಿಸಿದ್ರು. ಬಳಿಕ ತಮ್ಮ ಪ್ಲಾನ್‌ನಂತೆ ಪರಿಚಯಸ್ಥರಿಗೆ ಹತ್ಯೆ ಮಾಡುವಂತೆ 2 ಲಕ್ಷಕ್ಕೆ ಸುಪಾರಿ ನೀಡಿ 15 ಸಾವಿರ ಹಣವನ್ನು ಮುಂಗಡವಾಗಿ ನೀಡಿದ್ದ ರವಿ ಪಾಟೀಲ್. ನವೆಂಬರ್ 5 ರಂದೇ ಪ್ಲಾನ್ ಮಾಡಿದ ಖತರ್ನಾಕ್ ಅಸಾಮಿಗಳು ಮೊದಲ ಯತ್ನದಲ್ಲಿ ವಿಫಲವಾಗಿದ್ರು. ಆದ್ರೆ ಎರಡನೇ ಬಾರಿಗೆ ಪರ್ಪೆಕ್ಟ್ ಪ್ಲಾನ್‌ ಮಾಡಿದ ಆರೋಪಿಗಳು ಪೋಮಾ ತಾಂಡಾ- ಅಲಿಯಂಬರ್ ಮಾರ್ಗ ಮದ್ಯದಲ್ಲಿ ನವೆಂಬರ್ 11 ರಂದು ಅಮೀತ್‌ನನ್ನ ಹತ್ಯೆ ಮಾಡಿ, ಅಪಘಾತ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಿದ್ರು.. ಸದ್ಯ ಹತ್ಯೆ ಮಾಡಿ ತಪ್ಲಿಸಿಕೊಳ್ಳಲು ಪ್ರಯತ್ನಿಸಿದ ಚೈತ್ರ ಆ್ಯಂಡ್ ಟೀಂ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತ ಆರೋಪಿ ರವಿ ಪಾಟೀಲ್ ನಂಬಿಕೆ ದ್ರೋಹ ಮಾಡಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನೆ ವಿಧಿಸಬೇಕು ಎಂದು ಆಗ್ರಹಿಸದ್ರು.

ಇನ್ನು ಅಲಿಯಂಬರ್- ಪೊಮಾ ತಾಂಡಾ ಮಾರ್ಗ ಮದ್ಯದಲ್ಲಿ ನವೆಂಬರ್ 11 ರಂದು ಅಪಘಾತದ ರೀತಿಯಲ್ಲಿ ಸಾವನ್ನಪ್ಪಿದ್ದ ಮೃತ ಅಮೀತ. ಘಟನೆ ಸಂಬಂಧ ಜನವಾಡ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ರು. ಇನ್ನು ಹತ್ಯೆ ಮಾಡಿದ ಆರೋಪಿಗಳು ಅಪಘಾತದ ಸ್ಥಳದಲ್ಲಿ ಒಂದು ಸುಳಿವು ನೀಡದೇ ಎಸ್ಕೆಪ್ ಆಗಲು ಪ್ರಯತ್ನಿಸಿದ್ರು.

ಆದ್ರೆ ಪ್ರಕರಣದಲ್ಲಿ ಸಿಗರೇಟ್ ಚಿಲ್ಲರೆ ವಿಚಾರ ಮಹತ್ವದ ಸುಳಿವು ನೀಡಿದ್ದು, ಅದರ ಜಾಡು ಹಿಡಿದು ತನಿಖೆ ಆರಂಭಿಸಿದ್ರು ಪೊಲೀಸರು. ಡಾಭಾಗೆ ತೆರಳಿದ್ದ ಆರೋಪಿಗಳು ನವೆಂಬರ್ 6ರಂದು ಸಿಗರೇಟ್ ಖರೀದಿಸಿ ಚಿಲ್ಲರೆ ಹಣ ಪಡೆಯದೇ ಮೋಟಾರ್ ವಾಹನವೊಂದನ್ನ ಹಿಂಬಾಲಿಸಿಕೊಂಡು ತೆರಳಿದ್ರು. ಚಿಲ್ಲರೆ ಹಣ ಪಡೆಯದ ಹಿನ್ನೆಲೆ, ವೆಹಿಕಲ್ ನಂಬರ್ ನೋಟ್ ಮಾಡಿಕೊಂಡಿದ್ದ ಡಾಬಾದ ಮಾಲೀಕ ನೀಡಿದ ಮಾಹಿತಿ ಆಧಾರದ ಮೇಲೆ ವೆಹಿಕಲ್ ಜಾಡು ಹಿಡಿದು ತನಿಖೆ ಮಾಡಿದ ಆರೋಪಿಗಳು ಪೊಲೀಸರಿಗೆ ಶರಣಾಗಿದ್ರು. ಸದ್ಯ ಪತ್ನಿ ಚೈತ್ರಾ, ಪತ್ನಿ ಪ್ರಿಯಕರ ಹೊನ್ನಿಕೇರಿ ನಿವಾಸಿ ರವಿ ಪಾಟೀಲ್, ವೆಂಕಟ್ ಗಿರಿಮಾಜೆ, ಆಕಾಶ, ಸಿಕಂದರ್ ಶಹಾ ಎಂಬುವವರನ್ನ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

ಇನ್ನು ಪೊಲೀಸ್ ವಿಚಾರಣೆಯಿಂದ ಬಹಿರಂಗವಾದ ಅಮಿತ್ ಪತ್ನಿ ಚೈತ್ರಾ ಅನೈತಿಕ ಸಂಬಂಧದ ವಿಷಯ ತಿಳಿದ ಕುಟುಂಬಸ್ಥರು ಶಾಕ್ ಆಗಿದ್ದು, ನಮ್ಮೊಂದಿಗೆ ಚೆನ್ನಾಗಿದ್ದ ಕುಟುಂಬದವನಂತೆ ಇದ್ದ ರವಿ ಪಾಟೀಲ್ ನಂಬಿಕೆ ದ್ರೋಹ ಮಾಡಿದ್ದಾನೆ. ಘಟನೆಯಿಂದ 5 ವರ್ಷದ ಮಗು ಅನಾಥವಾಗಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಒಟ್ನಲ್ಲಿ ಪ್ರಿಯಕರನ ಆಸೆಗೆ ತಾಳಿ ಕಟ್ಟಿದ ಗಂಡನಿಗೆ ಚಟ್ಟ ಕಟ್ಟಿದ ಪತ್ನಿ ಆ್ಯಂಡ್ ಟೀಂ ಸದ್ಯ ಕಂಬಿ ಎಣಿಸುತ್ತಿದ್ದು, ಆರೋಪಿ ರವಿ ಪಾಟೀಲ್ ಅಂತಹ ಕ್ರಿಮಿಗಳಿಂದಾಗಿ ಅನೇಕ ಕುಟುಂಬಗಗಳು ಬೀದಿ ಪಾಲಾಗಿದ್ದು, ಯಾರನ್ನೆ ಆದ್ರೂ ಮನೆ ಒಳಗೆ ಕರೆಸಿಕೊಳ್ಳುವ ಮೊದಲು ಯೋಚಿಸುವಂತಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments