Tuesday, January 27, 2026
26.9 C
Bengaluru
Google search engine
LIVE
ಮನೆ#Exclusive NewsTop Newsಖಾತೆ ಮಾಡಲು ವಿಳಂಬ, ಅಧಿಕಾರಿಗಳ ವಿರುದ್ಧ ಗರಂ-ಲೋಕಾಯುಕ್ತ-ಎಸ್.ಪಿ.

ಖಾತೆ ಮಾಡಲು ವಿಳಂಬ, ಅಧಿಕಾರಿಗಳ ವಿರುದ್ಧ ಗರಂ-ಲೋಕಾಯುಕ್ತ-ಎಸ್.ಪಿ.

ಚಿಂತಾಮಣಿ: ಸಾರ್ವಜನಿಕರಿಗೆ ಕಾನೂನು ರೀತಿಯಲ್ಲಿ ಆಗಬೇಕಾದ ಕೆಲಸಗಳು ವಿಳಂಬವಾಗದೆ ಮಾಡಿಕೊಡುವಂತೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಲೋಕಾಯುಕ್ತ ಎಸ್ ಪಿ ಆಂಟೋನಿ ಜಾನ್ ತಿಳಿಸಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಲೋಕಾಯುಕ್ತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ. ಸಾರ್ವಜನಿಕ ಕುಂದು ಕೊರತೆಗಳ ಅಹವಾಲು ಸ್ವೀಕರಿಸುವ ಸಭೆಯನ್ನುದೇಶಿಸಿ ಮಾತನಾಡಿ. ಸರ್ಕಾರದ ಎಲ್ಲಾ ರೀತಿಯ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ವಿಳಂಬವಿಲ್ಲದೆ ದೊರಕಿಸಿ ಕೊಡಬೇಕು. ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರ ಕೆಲಸಗಳನ್ನು ಸಕಾಲದಲ್ಲಿ ಮಾಡಿಕೊಡಬೇಕು. ಜನರಿಂದ ದೂರುಗಳು ಬಂದರೆ ನಿಮ್ಮ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದನ್ನು ಎಲ್ಲಾ ಅಧಿಕಾರಿಗಳು ಅರ್ಥ ಮಾಡಿಕೊಂಡು ತಮ್ಮ‌ ಕರ್ತವ್ಯವನ್ನು ಚಾಚು ತಪ್ಪದೆ ನಿರ್ವಹಿಸಿ ಎಂದರು.

4೦ ಕ್ಕು ಹೆಚ್ಚು ದೂರುಗಳು :

ಲೊಕಾಯುಕ್ತ ಇಲಾಖೆಯ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರು ಕಂದಾಯ ಇಲಾಖೆ ವಿರುದ್ದ 18, ತಾಲ್ಲೂಕು ಪಂಚಾಯಿತಿ ವಿರುದ್ದ 12 ಸೇರಿ ಅಬಕಾರಿ ಇಲಾಖೆ, ಆರೋಗ್ಯ, ಶಿಕ್ಷಣ, ನಗರಸಭೆ, ತೋಟಗಾರಿಕೆ, ಬೆಸ್ಕಾಂ, ಜಿಲ್ಲಾಪಂಚಾಯಿತಿ, ಹಾಗೂ ಪಿಡ್ಲ್ಯೂ ಡಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಲಿಖಿತ ಮೂಲಕ 40ಕ್ಕೂ ಹೆಚ್ಚು ದೂರಗಳನ್ನು ಸಲ್ಲಿಸಿದರು.

ಕಂದಾಯ ಇಲಾಖೆ ವಿರುದ್ದ ಹೆಚ್ಚು ದೂರು :

ಸಭೆಯಲ್ಲಿ ಕಂದಾಯ ಇಲಾಖೆ ವಿರುದ್ದ ಖಾತೆ ವಿಳಂಬ ಹಕ್ಕುಪತ್ರ ವಿತರಣೆ, ಪಿಂಚಣಿ ಸೌಲಭ್ಯ, ಸರ್ವೆ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳು ಕಲ್ಪಿಸುವಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆಂದು 18 ಜನ ದೂರುಗಳನ್ನು ನೀಡಿದ್ದು ಕಂದಾಯ ಅಧಿಕಾರಿಗಳನ್ನು ಲೋಕಾ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು. ತಾಲೂಕು ಪಂಚಾಯಿತಿ ವಿರುದ್ದವೂ ಸಹ ರಸ್ತೆ, ಚರಂಡಿ ಸ್ವಚ್ಚತೆ, ಇ-ಖಾತೆ ಸೇರಿದಂತೆ ನೀರಿನ‌ ಸೌಲಭ್ಯ ಇತರೆ‌ ಮೂಲಭೂತ ಸೌಲಭ್ಯಗಳು ಕಲ್ಪಿಸುವಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ವಿಫಲವಾಗಿದ್ದಾರೆಂದು ತಾಲೂಕು ಪಂಚಾಯತಿ ಇಲಾಖೆಯ ವಿರುದ್ದ ಲೋಕಾ ಅಧಿಕಾರಿಗಳಿಗೆ 12 ದೂರುಗಳನ್ನು ನೀಡಿದರು.

ಇಒಗೆ ತರಾಟೆ :

ತಾಲೂಕಿನ ಕಸಬಾ ಹೋಬಳಿ ಕುರುಬೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ. ಸೀಕಲ್ ಗ್ರಾಮದ ಮುನಿರತ್ನಮ್ಮ ಎಂಬುವರು ನಿವೇಶನದ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಒಂದು ವರ್ಷವಾದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಖಾತೆ ಮಾಡಿಕೊಡಲು ವಿಳಂಬ ಮಾಡಿದ್ದಾರೆ. ಇಂದು ಲೋಕಾಯುಕ್ತ ಎಸ್ ಪಿ ಆಂಟೋನಿ ಜಾನ್ ಗೆ ಲಿಖಿತ ಮೂಲಕ ದೂರು ಸಲ್ಲಿಸಿದಾಗ. ಎಸ್ ಪಿ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯನಿರ್ವಹಣಾಧಿಕಾರಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿ ವಿರುದ್ಧ ಗರಂ ಆಗಿದ್ದರು. ಖಾತೆ ಮಾಡಿಕೊಡದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಎಚ್ಚರಿಕೆ ನೀಡಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments