Wednesday, January 28, 2026
20.2 C
Bengaluru
Google search engine
LIVE
ಮನೆ#Exclusive NewsTop Newsರಿಟೈರ್ಡ್ ಟೈಮಲ್ಲಿ ಲೂಟಿ - ಲೋಕ ಬಲೆಗೆ ಚೀಫ್ ಇಂಜಿನಿಯರ್

ರಿಟೈರ್ಡ್ ಟೈಮಲ್ಲಿ ಲೂಟಿ – ಲೋಕ ಬಲೆಗೆ ಚೀಫ್ ಇಂಜಿನಿಯರ್

ಕಲಬುರಗಿ: ಈ ತಿಂಗಳು ನಿವೃತ್ತಿಯಾಗುತ್ತಿರುವ ರಾಜ್ಯ ಹೆದ್ದಾರೆ ಅಭಿವೃದ್ಧಿ ಯೋಜನಾಧಿಕಾರಿ ಜಗನ್ನಾಥ ಹಲಿಂಗೆ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ.

ಕಲಬುರಗಿ ಲೋಕೋಪಯೋಗಿ ವಿಭಾಗದ ಚೀಫ್ ಇಂಜಿನಿಯರಾಗಿದ್ದ ಜಗನ್ನಾಥ್ ಹಲಿಂಗೆ ಎಂಟು ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು.

25 ದಿನಗಳು ಕಳೆದರೆ ನಿವೃತ್ತಿಯಾಗಿತ್ತಿದ್ದ ಜಗನ್ನಾಥ ಹಲಿಂಗೆ ಅವರ ಕಲಬುರಗಿ ನಗರದ ಕಲಬುರಗಿ ನಗರದ ಜಯನಗರದಲ್ಲಿ ಮನೆ ಬೆಂಗಳೂರು ಮನೆ ಸೇರಿ ಒಟ್ಟಾರೆ ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಲೋಕಾಯುಕ್ತದ ಆರು ತಂಡಗಳು ದಾಳಿ ನಡೆಸಿವೆ.

ಕಲಬುರಗಿಯಲ್ಲಿರುವ ಮನೆಯಲ್ಲಿ ಬೆಳ್ಳಿ, ಆಭರಣ, ಆಸ್ತಿಗೆ ಸಂಬಂಧಿಸಿದಂತೆ ದಾಖಲೆಗಳು ಪತ್ತೆಯಾಗಿವೆ. ಲಾಕರ್ ಗಳನ್ನು ಲೋಕಾ ಅಧಿಕಾರಿಗಳು ತೆರೆದು ಪರಿಶೀಲನೆ ನಡೆಸಿದ್ದಾರೆ. ಜಗನ್ನಾಥ್ ಹಲಿಂಗೆ ಪ್ರತ್ನಿಯ ಜೊತೆ ಬೆಂಗಳೂರಿನಲ್ಲಿ ವಾಸವಾಗಿದ್ದು, ಲಾಕರ್​ಗಳ ಕೀ ಇಲ್ಲದ ಕಾರಣ ಅಧಿಕಾರಿಗಳು ಒಡೆದು ಓಪನ್ ಮಾಡುತ್ತಿದ್ದಾರೆ.

ಅಪಾರ ಪ್ರಮಾಣದ ಆಸ್ತಿ ದಾಖಲೆ ಪತ್ರಗಳು ಸಹ ಪತ್ತೆಯಾಗಿವೆ. ಕಲಬುರಗಿ ಜಿಲ್ಲೆಯ ಆಳಂದದಲ್ಲಿ 30 ಎಕರೆ ಜಮೀನು ಒತ್ರ ಪತ್ತೆಯಾಗಿದೆ. ತಾವರೆಗೆರೆಯಲ್ಲಿ ಕೂಡ ಜಮೀನು ಇರೋದು ಪತ್ತೆಯಾಗಿದೆ. ಬೀದರ್ ಮತ್ತು ಬಸವಕಲ್ಯಾಣ ಕೂಡ ಆಸ್ತಿ ದಾಖಲೆ ಪತ್ರ ಪತ್ತೆಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯ ಬೆಳ್ಳಿ ಚಿನ್ನಾಭರಣ ಪತ್ತೆಯಾಗಿವೆ.

ಅದೇ ತೆರನಾಗಿ 1 ಕೆ.ಜಿ.ಗೂ ಅಧಿಕ ಬೆಳ್ಳಿ ಆಭರಣಗಳು, 150 ಗ್ರಾಂ ಚಿನ್ನಾಭರಣ ಮತ್ತು 50,000 ಅಧಿಕ ನಗರದ ಹಣ ಪತ್ತೆಯಾಗಿದೆ. ಕಲಬುರಗಿ ಜಯನಗರ ಬಡಾವಣೆ ಮನೆಯಲ್ಲಿ ಪತ್ತೆಯಾಗಿವೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments