ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮುಡಾ ಹಗರಣದ ತನಿಖೆಯನ್ನು ಲೋಕಾಯುಕ್ತ ನಡೆಸುತ್ತಿತ್ತು. ಇದೀಗ ತನಿಖೆ ಕೊನೆಯ ಹಂತಕ್ಕೆ ಬಂದಿದ್ದು, ಲೋಕಾಯುಕ್ತ ವರದಿ ನೀಡಿದೆ.
ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜನ್ ಗೆ ಕ್ಲೀನ್ ಚಿಟ್ ನೀಡಲಾಗಿದೆ.
ಈ ಕುರಿತು ಲೋಕಾಯುಕ್ತ ಅಧಿಕಾರಿಗಳು ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟಿಸ್ ನೀಡಿದ್ದಾರೆ. ನೋಟಿಸ್‌ನಲ್ಲಿ ಆರೋಪಿಗಳ ಆರೋಪಗಳನ್ನು ಸಾಭಿತು ಪಡಿಸಲು ಸಾಕಷ್ಟು ಸಾಕ್ಷ್ಯಧಾರಗಳ ಕೊರತೆ ಇದೆ ಎಂದು ಹೇಳಿದೆ. ಇನ್ನು ಅಂತಿಮ ವರದಿ ಕೋರ್ಟ್ ಸಲ್ಲಿಕೆಯಾಗುತ್ತಿದೆ, ವಿರೋಧವಿದ್ದರೆ ವಾರದೊಳಗೆ ಕೋರ್ಟ್ ಗೆ ತಿಳಿಸಿ ಎಂದಿದ್ದಾರೆ.


