ನವದೆಹಲಿ: ಲೋಕಸಭೆಯಲ್ಲಿ  ತನ್ನ ಭಾಷಣಕ್ಕೆ ಅಡ್ಡಿಪಡಿಸುತ್ತಿದ್ದ ಪ್ರತಿಪಕ್ಷ ಸದಸ್ಯರಿಗೆ ಪ್ರಧಾನಿ ಮೋದಿ ಕುಡಿಯಲು ನೀರು ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಮೇಲೆ ಮೋದಿ ಭಾಷಣ ಮಾಡಿದರು. ಮೋದಿ ಭಾಷಣ ಮಾಡಲು ಮುಂದಾಗುತ್ತಿದ್ದಂತೆ ಪ್ರತಿ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಲು ಆರಂಭಿಸಿದರು.

ʼಮಣಿಪುರ್‌ ಗೋʼ, ʼಮಣಿಪುರ್‌ ವಾಂಟ್‌ ಜಸ್ಟಿಸ್‌ʼ, ʼಅಗ್ನಿವೀರ್‌ʼ ಇತ್ಯಾದಿ ಘೋಷಣೆ ಕೂಗಿ ಅಡ್ಡಿ ಪಡಿಸುತ್ತಿದ್ದರು. ಬಾವಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದ ಪ್ರತಿಪಕ್ಷದ ಸದಸ್ಯರಿಗೆ ಅಲ್ಲಿಂದ ತೆರಳುವಂತೆ ಸ್ಪೀಕರ್‌ ಓಂ ಬಿರ್ಲಾ ಸೂಚಿಸಿದರೂ ಅವರು ಸ್ಥಳದಿಂದ ತೆರಳದೇ ಪ್ರತಿಭಟನೆ ಮುಂದುವರಿಸುತ್ತಲೇ ಇದ್ದರು.

ಪ್ರತಿಪಕ್ಷಗಳ ಸದಸ್ಯರು ಪ್ರತಿಭಟನೆ ನಿಲ್ಲಿಸುವುದಿಲ್ಲ ಎನ್ನುವುದು ಮೋದಿಗೆ ತಿಳಿಯುತ್ತಿದ್ದಂತೆ ಸುದೀರ್ಘ ಭಾಷಣ ಮಾಡತೊಡಗಿದರು. ಸದನ ಬಾವಿಗೆ ಇಳಿದು ಪ್ರತಿಭಟಿಸುತ್ತಿದ್ದ ಕೆಲ ಸದಸ್ಯರು ಕಿರುಚಿ ಸುಸ್ತಾಗಿದ್ದರು. ಇದನ್ನು ಗಮನಿಸಿದ ಮೋದಿ ತನಗೆ ನೀಡಿದ್ದ ನೀರನ್ನು ಪ್ರತಿಪಕ್ಷದ ಸದಸ್ಯರಿಗೆ ನೀಡಿದರು. ಒಬ್ಬರು ಸದಸ್ಯರು ನೀರನ್ನು ಕುಡಿದರು.

ಪ್ರಧಾನಿ ಮೋದಿ ಮೋದಿ ಮಂಗಳವಾರ 2 ಗಂಟೆ 15 ನಿಮಿಷ ಮಾತನಾಡಿದರು. ಆರಂಭದಿಂದ ಕೊನೆಯವರೆಗೂ ಪ್ರತಿ ಪಕ್ಷದ ಸದಸ್ಯರು ಘೋಷಣೆ ಕೂಗಿ ಅಡ್ಡಿಪಡಿಸಿದರು. ಮೋದಿ ಭಾಷಣಕ್ಕೆ ವಿಪಕ್ಷ ಸದಸ್ಯರು ಅಡ್ಡಿ ಪಡಿಸಿದ್ದಕ್ಕೆ ಸದನ ಕೊನೆಗೆ ಖಂಡನಾ ಗೊತ್ತುವಳಿಯನ್ನು ಅಂಗೀಕರಿಸಿತು.

 

ಜಾಹೀರಾತು ನೀಡಲು ಸಂಪರ್ಕಿಸಿ
Phone Number : +91-9164072277
Email id : salesatfreedomtv@gmail.com

By admin

Leave a Reply

Your email address will not be published. Required fields are marked *

Verified by MonsterInsights