Thursday, November 20, 2025
22.5 C
Bengaluru
Google search engine
LIVE
ಮನೆ#Exclusive NewsTop Newsಲೋಕಸಭಾ ಚುನಾವಣೆಗೆ ಪಂಚ ರಾಜ್ಯ ಎಲೆಕ್ಷನ್ ‘ಪಂಚ್’.!

ಲೋಕಸಭಾ ಚುನಾವಣೆಗೆ ಪಂಚ ರಾಜ್ಯ ಎಲೆಕ್ಷನ್ ‘ಪಂಚ್’.!

ನವದೆಹಲಿ; ಲೋಕಸಭಾ ಚುನಾವಣೆಗೆ ಪಂಚ ರಾಜ್ಯ ಎಲೆಕ್ಷನ್ ಕಾಂಗ್ರೆಸ್‌ಗೆ ‘ಪಂಚ್’ ಕೊಟ್ಟಿದೆ. ಸಂಸದರನ್ನು ವಿಧಾನಸಭೆ ಕಣಕ್ಕಿಳಿಸಿ ಯಶಸ್ಸು ಕಂಡಿದೆ. ಈ ಗೆಲುವು ಕಾಂಗ್ರೆಸ್‌ ಮನೆಯಲ್ಲಿ ನಿದ್ದೆಗೆಡಿಸಿದೆ. ಬಿಜೆಪಿಯ ಮಂತ್ರವನ್ನೇ ಕರ್ನಾಟಕದಲ್ಲಿ ತಿರುಗುಮುರುಗಾಗಿ ಪ್ರಯೋಗಿಸಲು ಕಾಂಗ್ರೆಸ್​ನಲ್ಲಿ ಚಿಂತನೆ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಹೈಕಮಾಂಡ್ ಈ ಬಾರಿ ಕರ್ನಾಟಕದಿಂದ ಹೆಚ್ಚು ಸೀಟುಗಳನ್ನು ಗೆಲ್ಲಲೇಬೇಕೆಂಬ ಲೆಕ್ಕಾಚಾರದಲ್ಲಿದೆ. ಇದನ್ನು ಸಾಧಿಸಬೇಕೆಂದರೆ 8 ರಿಂದ 9 ಲೋಕಸಭೆ ಕ್ಷೇತ್ರಗಳಲ್ಲಿ ಸಚಿವರಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯವನ್ನು ರಾಜ್ಯ ಘಟಕದೊಂದಿಗೆ ಹಂಚಿಕೊಂಡಿದೆ.

ಲೋಕ ಗೆಲ್ಲಲು ಕಾಂಗ್ರೆಸ್ ಮಾಸ್ಟರ್‌ ಪ್ಲ್ಯಾನ್​..!

2019ರ ಲೋಕಸಭೆ ಚುನಾವಣೆಯಲ್ಲಿ ಬರೀ 1 ಸ್ಥಾನ ಗೆದ್ದು ತೀವ್ರ ಮುಖಭಂಗ ಅನುಭವಿಸಿದ್ದ ಕಾಂಗ್ರೆಸ್, ಈ ಬಾರಿ 15ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಆದರೆ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಸೇರಿ ಮೂರು ರಾಜ್ಯಗಳಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆ ಗೆದ್ದಿರುವುದು ಕರ್ನಾಟಕದಲ್ಲಿ ಕಳೆಗುಂದಿದ್ದ ಬಿಜೆಪಿಯ ನೈತಿಕ ಸ್ಥೈರ್ಯ, ಹುಮ್ಮಸ್ಸನ್ನು ಹೆಚ್ಚಿಸಿದೆ.

ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ಲೋಕಸಭೆ ಚುನಾವಣೆ ‘ದ್ವಿಪಕ್ಷೀಯ ಕದನ’ವಾಗಿ ಮಾರ್ಪಟ್ಟಿದೆ.ಈಗಾಗಲೇ ಬಿಜೆಪಿ ಜೊತೆ ಸೇರಿ ಕಾಂಗ್ರೆಸ್ ವಿರುದ್ಧ ಹೋರಾಡಲು ಪಣ ತೊಟ್ಟಿರುವ ಜೆಡಿಎಸ್, ಪ್ರಧಾನಿ ಮೋದಿ ಅವರ ಜೊತೆ ಚರ್ಚೆ ನಡೆಸಿದ್ದಾರೆ..ಇದರಿಂದಾಗಿ, ಮಂತ್ರಿ ಸ್ಥಾನದಲ್ಲಿರುವ ‘ಬಲಶಾಲಿ’ಗಳಿಗೆ ಟಿಕೆಟ್ ನೀಡಿದರಷ್ಟೇ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲು ಸಾಧ್ಯವಿದೆ ಎಂಬ ಪ್ರಾಥಮಿಕ ಹಂತದ ಚರ್ಚೆಗಳು ದಿಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳದಲ್ಲಿ ಗುಸುಗುಸು ನಡಿಯುತ್ತಿದೆ..

ಈ ಬಗ್ಗೆ ಕಾಂಗ್ರೆಸ್‌ ಲೋಕಸಭೆ ಕ್ಷೇತ್ರಗಳ ಪರಿಸ್ಥಿತಿಗಳ ಬಗ್ಗೆ ಆಂತರಿಕ ಸಮೀಕ್ಷೆ ನಡೆಸಿ,ಹಲವು ಕ್ಷೇತ್ರಗಳಲ್ಲಿ ಸಚಿವರಿಗೆ ಟಿಕೆಟ್ ನೀಡಬೇಕೆಂದು ಹೇಳಿದೆ.. ಕೆಲ ಸಚಿವರು ಮಂತ್ರಿಸ್ಥಾನ ಬಿಟ್ಟು ಸಂಸದ ಚುನಾವಣೆಗೆ ಸ್ಪರ್ಧಿಸಲು ಸಚಿವರು ಒಪ್ಪಬಹುದೇ ಎಂಬ ಪ್ರಶ್ನೆಗೆ, ‘ಹೈಕಮಾಂಡ್ ಸೂಚಿಸಿದರೆ ಅವರು ಸ್ಪರ್ಧಿಸಲೇಬೇಕಾಗುತ್ತದೆ. ಒಂದು ವೇಳೆ ಚುನಾವಣೆ ಗೆದ್ದರೆ ಅವರಿಂದ ತೆರವಾಗುವ ಶಾಸಕ ಕ್ಷೇತ್ರದಲ್ಲಿ ಸಚಿವರು ಶಿಫಾರಸು ಮಾಡುವ ವ್ಯಕ್ತಿಗೆ ಟಿಕೆಟ್ ನೀಡಲಾಗುತ್ತದೆ’ ಎಂದು ಪಕ್ಷದ ಮೂಲಗಳು ತಿಳಿಸಿದೆ….

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments