ಮೈಸೂರು: ನಂಬಿಕೆಗೆ, ಭಕ್ತಿಗೆ, ಇತಿಹಾಸಕ್ಕೆ ಮತ್ತೊಂದು ಹೆಸರು ಚಾಮುಂಡಿ ಬೆಟ್ಟ. ತಾಯಿ ಚಾಮುಂಡಿ ಇತಿಹಾಸ ಉತ್ಸವ, ಆರಾಧನೆ, ಸಂಪ್ರದಾಯ ಮೊದಲು ತಿಳಿಸಿ. ಸಂಪ್ರದಾಯ ಅರಿತು ಅವರು ತಮ್ಮ ಕಾರ್ಯ ಮಾಡಲಿ. ದಸರಾ ಉದ್ಘಾಟಕರು ಈ ಸ್ಥಾನಕ್ಕೆ ಅರ್ಹರೋ ಅಥವಾ ಇಲ್ಲ ವೋ ಎಂಬ ಚರ್ಚೆ ಮಾಡಲ್ಲ. ನಮ್ಮ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಉದ್ಘಾಟಕರು ನಡೆದುಕೊಳ್ಳಲಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಇಂದು ಮೈಸೂರಿನ ಶ್ರೀಕ್ಷೇತ್ರ ಚಾಮುಂಡಿಬೆಟ್ಟಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ನೀಡಿ, ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಯಾರನ್ನು ತೃಪ್ತಿಪಡಿಸಲು ಉದ್ಘಾಟಕರನ್ನು ಆಯ್ಕೆ ಮಾಡಿಕೊಂಡಿದ್ದೆಯೋ ಗೊತ್ತಿಲ್ಲ. ಧಾರ್ಮಿಕ ಕೆಲಸದ ವಿಚಾರದಲ್ಲಿ ಸರಕಾರ ಟೇಕ್ ಇಟ್ ಫಾರ್ ಗ್ರಾಂಟೆಂಡ್ ಎಂದುಕೊಳ್ಳಬೇಡಿ. ಉದ್ಘಾಟಕರಿಗೆ, ಸರಕಾರಕ್ಕೆ ಚಾಮುಂಡಿ ಬೆಟ್ಟದ ಶಿಷ್ಟಾಚಾರ, ಸಂಪ್ರ ದಾಯ ಪಾಲಿಸುವ ಬುದ್ದಿ ಕೊಡಲಿ ಎಂದರು.
ಕ್ಷುಲಕ ರಾಜಕಾರಣ ಬಿಟ್ಟು ಜನರ ನೋವಿಗೆ ಸ್ಪಂದಿಸಿ. ಅತಿವೃಷ್ಠಿಯಿಂದ ಎಲ್ಲೆಡೆ ನಷ್ಟವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ತಮ್ಮ ಜಿಲ್ಲೆಗಳಿಗೆ ಕಳಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನು ತುಮಕೂರಿನಿಂದ ಸ್ಪರ್ಧಿಸಲ್ಲ ಎಂಬ ಹೇಳಿಕೆ ಬಗ್ಗೆ ಮಾತನಾಡಿದ ಅವರು, ತುಮಕೂರಿನಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ. ಹೀಗಾಗಿ ಅಲ್ಲಿ ಮುಂದೆ ಚುನಾವ ಣೆಗೆ ಸ್ಪರ್ಧಿಸಲ್ಲ ಎಂದು ಹೇಳಿದ್ದೇನೆ. ಇನ್ನೂ ಬೇರೆ ಕಡೆ ಹೋಗೋಣ ಎಂದಿದ್ದೆ. ಎಲ್ಲಿ ಅಂತಾ ನಿರ್ಧಾರವಾಗಿಲ್ಲ. ದೇವರ ಆಶೀರ್ವಾದ, ದೇವರ ಇಚ್ಚೆ ಏ ನಿದೆಯೋ ಗೊತ್ತಿಲ್ಲ ಎಂದರು.
ಧರ್ಮಸ್ಥಳ ವಿಚಾರಕ್ಕೆ ಮಾತನಾಡಿದ ಅವರು, ಸುಳ್ಳನ್ನು ಸಾವಿರ ಬಾರಿ ಹೇಳಿದರೂ ಅದು ಸುಳ್ಳೇ ಎಂಬುದು ಧರ್ಮಸ್ಥಳ ವಿಚಾರದಲ್ಲಿ ಸಾಬೀತಾಗಿದೆ. ಬಾಲಂಗೋಂಚಿಗಳು ಎಡಪಂಥೀಯರ ಮಾತಿಗೆ ಸರಕಾರ ಇನ್ನು ಮುಂದೆ ಬಲಿಯಾಗಬಾರದು. ಸರ್ಕಾರ ತಾನು ಮಾಡಿದ ತಪ್ಪನ್ನು ಈಗಲಾದರು ಅರಿತು ಕೊಳ್ಳಲಿ ಎಂದರು.
ಸೆಪ್ಟೆಂಬರ್ 22 ರಿಂದ ಹೊಸ ಜಿಎಸ್‌ಟಿ ಸ್ಟ್ರಾಬ್ ನಿಗದಿ ವಿಚಾರವಾಗಿ ಮಾತನಾಡಿದ ಸೋಮಣ್ಣ, ನರೇಂದ್ರ ಮೋದಿ ಪ್ರಧಾನಿಯಾಗಿ 12 ವರ್ಷ ತುಂಬುತ್ತಿರುವ ವೇಳೆ ದೇಶದ ಜನರಿಗೆ ನೀಡಿರುವ ಗಿಫ್ಟ್ ಇದು. ಜನರ ಅನುಕೂಲಕ್ಕಾಗಿ ಜಿಎಸ್‌ಟಿಗೆ ಗಣನೀಯವಾಗಿ ಸುಧಾರಣೆ ತರಲಾಗಿದೆ. ಇದು ಯಾವುದೇ ಚುನಾವಣೆಯನ್ನು ಮುಂದಿಟ್ಟುಕೊಂಡು ಮಾಡಿರುವ ಕ್ರಮ ಅಲ್ಲ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ಜನರ ಅನುಕೂಲಕ್ಕಾಗಿ ಹೊರ ನೀತಿ ಮಾಡಲಾಗುತ್ತಿದೆ. ಇದಕ್ಕಾಗಿ ವಿತ್ತ ಸಚಿವೆ ಹಗಲಿರುಲು ಶ್ರಮಿಸುತ್ತಿದ್ದಾರೆ ಎಂದರು.