Top Newsರಾಜಕೀಯರಾಜ್ಯವೆಬ್ ಸ್ಟೋರೀಸ್

ಪ್ರತಾಪ್ ಸಿಂಹ ಮತೀಯ ಅಂಧ ಭಾವನೆಗಳಿಂದ ಹೊರಗೆ ಬರಲಿ- ಹೆಚ್​.ಸಿ ಮಹದೇವಪ್ಪ

ಬೆಂಗಳೂರು: ಮೈಸೂರು ದಸರಾ ಉದ್ಘಾಟನೆಗೆ ಭಾನು ಮುಷ್ತಾಕ್​​​​ ಅವರನ್ನು ರಾಜ್ಯ ಸರ್ಕಾರ ಆಹ್ವಾನಿಸಿರುವ ನಿರ್ಧಾರವನ್ನು ಪ್ರಶ್ನಿಸಿ, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾ ಗೊಳಿಸಿದೆ.

ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಹೆಚ್​.ಸಿ ಮಹದೇವಪ್ಪ ಪ್ರತಾಪ್​​ ಸಿಂಹ ವಿರುದ್ಧ ಕಿಡಿಕಾರಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಮತೀಯ ಅಂಧ ಭಾವನೆಗಳಿಂದ ಹೊರಗೆ ಬಂದು ಭಾರತೀಯ ನಾಗರಿಕರಾಗಿ ನಡೆದುಕೊಳ್ಳಲಿ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ. ಚುನಾಯಿತ ಸರ್ಕಾರದಲ್ಲಿ ಸಂವಿಧಾನಾತ್ಮಕವಾಗಿ ನಮ್ಮ ನಡೆ ನಿರ್ಧಾರ ಆಗಬೇಕು. ದಸರಾ ಉದ್ಘಾಟನೆ ವಿಚಾರದಲ್ಲಿ ನಾವು ಅದಕ್ಕೆ ಪೂರಕವಾದ ನಿರ್ಧಾರ ಮಾಡಿದ್ವಿ. ಅನವಶ್ಯಕವಾಗಿ ಅಂಕಣಕಾರರ ಆಗಿದ್ದವರು, ಎಂಪಿ ಆದವರು, ಸಂವಿಧಾನ ಹಾಗೂ ಅದರ ಹಕ್ಕುಗಳನ್ನ ತಿಳಿದುಕೊಂಡ ಪ್ರತಾಪ್ ಸಿಂಹ ಅವರು ಹೀಗೆ ಮಾತಾಡಿದ್ರೆ ಹೇಗೆ ಎಂದು ಮಹದೇವಪ್ಪ ಪ್ರಶ್ನಿಸಿದ್ದಾರೆ.

Comments (0)

Your email address will not be published. Required fields are marked *

Back to top button