ರಾಜ್ಯ ಬಿಜಿಪಿಯು ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಉಪ್ಪಾರ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು.
ಕೊಪ್ಪಳದಲ್ಲಿ ಗೆಲ್ಲುವ ಸಾಮರ್ಥ್ಯವಿರುವ ನಮ್ಮ ಸಮುದಾಯದ ಪ್ರಭಾಕರ ಚಿಣಿಯವರಿಗೆ,ಟಿಕೆಟ್ ನೀಡಲೇಬೇಕು ಎಂದು ಬ್ರಹ್ಮವಿದ್ಯಾನಗರ ಭಗೀರಥ ಪೀಠಾಧ್ಯಕ್ಷರಾದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಒತ್ತಾಯಿಸಿದರು.
ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಉಪ್ಪಾರ ಸಮುದಾಯವು ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿದೆ.ಕಳೆದ ಬಾರಿ ಎಂಟತ್ತು ಆಕಾಂಕ್ಷಿಗಳಿದ್ದರು ಅಸೆ೦ಬ್ಲಿ ಟಿಕೆಟ್ ಯಾರೊಬ್ಬರಿಗೂ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿಟ್ಟು ನಮ್ಮ ಸಮುದಾಯ ಬಿಜೆಪಿ ಬೆನ್ನಿಗೆ ನಿಂತಿದೆ,ಈ ಬಾರಿ ಪ್ರಭಾಕರ ಚಿಣಿಯವರಿಗೆ ಕೊಪ್ಪಳ ಟಿಕೆಟ್ ನೀಡುವ ಮೂಲಕ ,ನಮ್ಮ ಉಪ್ಪಾರ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಸ್ವಾಮೀಜಿ ಒತ್ತಾಯಿಸಿದರು.
ಈ ಬಾರಿ ಕೊಪ್ಪಳದಲ್ಲಿ ಚಿಣಿಯವರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಗೆಲುವು ನಿಶ್ಚಿತ ಎಂದು ಕೊಪ್ಪಳ ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷರು ಯಲ್ಲಪ್ಪ ಗದ್ದಿ ಆಗ್ರಹಿಸಿದರು.ಅದೇ ವೇಳೆ ಮಾತನಾಡಿದ ಚಿಕ್ಕಮಗಳೂರು ಜಿಲ್ಲಾ ಓಬಿಸಿ ಮೋರ್ಚಾದ ಅಧ್ಯಕ್ಷ ಟಿ ಆರ್ ಲಕ್ಕಪ್ಪ ಸಾಕಷ್ಟು ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ನನ್ನ ಉಪ್ಪಾರ ಸಮುದಾಯವನ್ನ ಪ್ರತಿನಿಧಿಸುವ ಯೋಗ್ಯತೆ ಮತ್ತು ಅರ್ಹತೆ ನನಗಿದೆ ಈ ಬಾರಿ ಜನರ ಆಗ್ರಹದಂತೆ ಬಿಜೆಪಿ ತನಗೆ ಟಿಕೆಟ್ ನೀಡುವ ಭರವಸೆ ನೀಡಿದರೆ ,ಚಿಕಮಗಳೂರು ಜನ ನನ್ನನ್ನ ಗೆಲ್ಲಿಸುತ್ತಾರೆ ಎಂಬ ಭರವಸೆ ನನಗಿದೆ ಎಂದರು.
ಒಟ್ಟಾರೆ ರಾಜ್ಯದ ಒಬಿಸಿ ಬಾಹುಲ್ಯ ಕ್ಷೇತ್ರಗಳಲ್ಲಿ ವಿಶೇಷವಾಗಿ ಕೂಪ್ಪಳ ಕ್ಷೇತ್ರದಲ್ಲಿ ಒಬಿಸಿ ಮತಗಳು ಅತಿ ಹೆಚ್ಚು ಪ್ರಮಾಣದಲ್ಲಿವೆ,ಕ್ಷೇತ್ರದ ಇತಿಹಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಬಿಸಿ ಅಭ್ಯರ್ಥಿಗಳೇ ಆರಿಸಿ ಬಂದಿದ್ದಾರೆ. ಹಾಗಾಗಿ ಕ್ಷೇತ್ರಕ್ಕೆ ಒಬಿಸಿ ಅಭ್ಯರ್ಥಿಗಳನ್ನೇ ಹಾಕಬೇಕು ಎಂಬ ಆಗ್ರಹವನ್ನ ಸುದ್ದಿಗೋಷ್ಠಿಯಲ್ಲಿ ಅನೇಕ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು .